೩೨ ಜನರ ನಿರ್ದೋಷತ್ವ ಪ್ರಶ್ನಿಸಿದ ಮನವಿಯ ಮೇಲೆ ಆಗಸ್ಟ್ ೧ ರಂದು ವಿಚಾರಣೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಬಾಬರಿ ಮಸೀದಿ ವಿದ್ವಂಸದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೨೦೨೦ ರಲ್ಲಿ ೩೨ ಜನರನ್ನು ನಿರಪರಾಧಿಗಳೆಂದು ಘೋಷಿಸಿತ್ತು. ಈ ನಿರ್ಣಯವನ್ನು ಪ್ರಶ್ನಿಸುವ ಮನವಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಆಗಸ್ಟ್ ೧ ರಂದು ವಿಚಾರಣೆ ನಡೆಯುವುದು. ಅಯೋಧ್ಯೆಯ ಹಾಜಿ ಮಹಮ್ಮದ್ ಅಹಮದ್ ಮತ್ತು ಸೈಯದ್ ಅಖಲಾಕ್ ಅಹಮದ್ ಎಂಬಿಬ್ಬರು ಈ ಮನವಿ ದಾಖಲಿಸಿದ್ದಾರೆ.

೩೨ ಆರೋಪಿಗಳಲ್ಲಿ ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡವಾಣಿ, ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಭಾಜಪದ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ, ಬೃಜಭೂಷಣ ಶರಣ ಸಿಂಹ, ಉಮಾಭಾರತಿ, ಸಾದ್ವಿ ಋತಂಭರಾ ಮುಂತಾದವರು ಸೇರಿದ್ದಾರೆ ಇದೆ.