ಬಿಹಾರದ ೧೫ ಸಾವಿರ ಮುಸಲ್ಮಾನ ಯುವಕರಿಗೆ ಶಸ್ತ್ರಾಸ್ತ್ರದ ಪ್ರಶಿಕ್ಷಣ : ಭಯೋತ್ಪಾದನೆಗೆ ಕುಮ್ಮಕ್ಕು !

ಬಂಧಿತ ಪಿ.ಎಫ್.ಐ ಕಾರ್ಯಕರ್ತರಿಂದ ಸಿಕ್ಕ ಮಾಹಿತಿ !

ಪಾಟಲಿಪುತ್ರ (ಬಿಹಾರ) – ಬಿಹಾರದ ನಿರುದ್ಯೋಗಿ ಮುಸಲ್ಮಾನರಿಗೆ ಹಣದ ಆಮಿಷ ತೋರಿಸಿ ಅವರನ್ನು ದೇಶದಲ್ಲಿ ಭಯೋತ್ಪಾದಕ ಕಾರ್ಯಾಚರಣೆ ಮಾಡುವುದಕ್ಕಾಗಿ ತಯಾರು ಮಾಡಲಾಗುತ್ತಿದೆ. ರಾಜ್ಯದ ೧೫ ಸಾವಿರಕ್ಕೂ ಹೆಚ್ಚು ಮುಸಲ್ಮಾನ ಯುವಕರಿಗೆ ಶಸ್ತ್ರಗಳನ್ನು ಉಪಯೋಗಿಸುವ ಪ್ರಶಿಕ್ಷಣ ನೀಡಲಾಗಿದೆ ಎಂಬ ಮಾಹಿತಿ ಕೆಲವು ದಿನಗಳ ಹಿಂದೆ ಬಂಧಿಸಲ್ಪಟ್ಟ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಕಾರ್ಯಕರ್ತ ಮತ್ತು ಭಯೋತ್ಪಾದಕರಾದ ಅತಹರ್ ಪರವೆಜ್ ಮತ್ತು ಅರ್ಮಾನ ಮಲಿಕ ವಿಚಾರಣೆಯಿಂದ ತಿಳಿದುಬಂದಿದೆ. ಯುವಕರ ಪ್ರಶಿಕ್ಷಣಕ್ಕಾಗಿ ರಾಜ್ಯದ ೧೫ ಜಿಲ್ಲೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರ ಮುಖ್ಯಾಲಯ ಪೂರ್ಣಿಯಾ ಜಿಲ್ಲೆಯಲ್ಲಿದೆ.

ಪಿ.ಎಫ್.ಐ ನ ಸದಸ್ಯರು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುವಾಗ ಅನಕ್ಷರಸ್ಥ ಮತ್ತು ನಿರುದ್ಯೋಗಿ ಯುವಕರನ್ನು ಒಗ್ಗೂಡಿಸಿದ್ದಾರೆ. ಇದರಲ್ಲಿ ಬಹಳಷ್ಟು ಯುವಕರು ಸರಕಾರಿ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮನೆಯ ಆರ್ಥಿಕ ಪರಿಸ್ಥಿತಿಯೂ ಸರಿಯಿಲ್ಲ. ಈ ಯುವಕರಿಗೆ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಲಾಗಿತ್ತು. ಮತ್ತೆ ಅವರ ಮನಸ್ಸಿನ ಪರಿವರ್ತನೆ ಮಾಡಲಾಗುತ್ತಿತ್ತು. ಅದರಿಂದ ಅನಕ್ಷರಸ್ಥ ಯುವಕರು ಅವರ ಬಲೆಗೆ ಬಿದ್ದಿದ್ದಾರೆ. ಅದರ ನಂತರ ಅವರಿಗೆ ಪ್ರಶಿಕ್ಷಣ ನೀಡುವುದಕ್ಕಾಗಿ ವಾಟ್ಸಾಪ್ ಗ್ರೂಪ ಗಳಲ್ಲಿ ಜೋಡಿಸಲಾಗಿದೆ. ನಿಧಾನವಾಗಿ ಅವರಿಗೆ ಧರ್ಮದ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿತ್ತು. ಅದರ ನಂತರ ಈ ಯುವಕರು ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ಪಡೆದುಕೊಳ್ಳಲು ಸಿದ್ದರಾದರು. ಪ್ರಶಿಕ್ಷಣ ಪೂರ್ಣವಾದ ನಂತರ ಈ ಯುವಕರಿಗೆ ಏನು ಮಾಡಲು ಹೇಳಲಾಗುತ್ತಿತ್ತು ? ಇದರ ಮಾಹಿತಿ ಮಾತ್ರ ಇಲ್ಲಿಯವರೆಗೆ ತಿಳಿದು ಬಂದಿಲ್ಲ.

ಸಂಪಾದಕೀಯ ನಿಲುವು

ಇಂತಹವರಿಂದ ನಡೆಯುವ ಅನಾಹುತ ತಡೆಯುವುದಕ್ಕಾಗಿ ಭಾರತೀಯ ರಕ್ಷಣಾ ವ್ಯವಸ್ಥೆ ಮತ್ತು ಹಿಂದೂಗಳು ಸಿದ್ದರಾಗಿದ್ದಾರೆಯೇ? ಇಂತಹವರನ್ನು ಹುಡುಕಿ ಸರಕಾರ ಅವರ ಮೇಲೆ ಯಾವಾಗ ಕ್ರಮ ಕೈಗೊಳ್ಳುವುದು? ಮತ್ತು ಅವರಿಗೆ ಯಾವಾಗ ಶಿಕ್ಷೆ ನೀಡುವುದು ? ಇದೇ ಯಕ್ಷ ಪ್ರಶ್ನೆ !