ಹರಿಯಾಣಾದಲ್ಲಿ ಗಣಿ ಮಾಫಿಯಾದಿಂದ ಪೊಲೀಸ್ ಉಪ ಅಧೀಕ್ಷಕರ ಹತ್ಯೆ

ಪೊಲೀಸ್ ಉಪ ಅಧೀಕ್ಷಕರ ಮೇಲೆ ಡಂಪರ್ ಹತ್ತಿಸಿ ಕೊಲೆ

ಚಂಡೀಗಢ – ಮೇವಾತ್‌ನ ಪೊಲೀಸ್ ಉಪ ಅಧೀಕ್ಷಕ ಸುರೇಂದರ್ ಸಿಂಗ್ ಬಿಷ್ಣೋಯ್ ಅವರನ್ನು ಗಣಿ ಮಾಫಿಯಾದವರು ಹತ್ಯೆ ಮಾಡಿದ್ದಾರೆ. ಪೊಲೀಸರು ಪಚ್‌ಗಾಂವ್‌ನ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಗಣಿಗಾರರನ್ನು ಬಂಧಿಸಲು ಹೋದಾಗ ಗಣಿ ಮಾಫಿಯಾಗೆ ಸೇರಿದ ಡಂಪರ್ ಚಾಲಕನು ಬಿಷ್ಣೋಯಿ ಅವರ ಮೇಲೆ ಡಂಪರ್ ಹತ್ತಿಸಿದ. ಈ ವೇಳೆ ಬಿಷ್ಣೋಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಈ ವರ್ಷ ನಿವೃತ್ತಿ ಹೊಂದಲಿದ್ದರು. ಈ ಬಗ್ಗೆ ನುಹ್‌ನ ಪೊಲೀಸರು, ‘ಪರಾರಿಯಾಗಿರುವ ಗಣಿ ಮಾಫಿಯಾ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ’, ಎಂದು ಹೇಳಿದ್ದಾರೆ.

೧. ಬೆಳಗ್ಗೆ ೧೧ ಗಂಟೆಗೆ ಬಿಷ್ಣೋಯ್ ಅವರಿಗೆ ‘ಸಂಬಂಧಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ’, ಎಂಬ ಮಾಹಿತಿ ಸಿಕ್ಕಿತು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರೊಂದಿಗೆ ಸ್ಥಳಕ್ಕೆ ತಲುಪಿದರು.

೨. ಆ ಸಮಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ಡಂಪರ್‌ನಿಂದ ಹೋಗುತ್ತಿದ್ದ ಗಣಿ ಮಾಫಿಯಾ ಬಿಷ್ಣೋಯ ಅವರಿಗೆ ಡಿಕ್ಕಿ ಹೊಡೆದು ಅವರ ಮೇಲೆ ಡಂಪರ ಹತ್ತಿಸಿದರು.

೩. ಈ ಹಿಂದೆಯೂ ಹರಿಯಾಣಾದಲ್ಲಿ ಗಣಿ ಮಾಫಿಯಾ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಸೋನಿಪತ್‌ನಲ್ಲಿ ಅಕ್ರಮ ಗಣಿಗಾರರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗಣಿ ಮಾಫಿಯಾ ದಾಳಿ ಮಾಡಿತ್ತು. ಆ ವೇಳೆ ಗಣಿ ಮಾಫಿಯಾ ಓರ್ವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನ ಸಮವಸ್ತ್ರ ಹರಿದಿದ್ದಲ್ಲದೇ ಪೊಲೀಸ್ ಪೇದೆಯನ್ನು ಥಳಿಸಿದ್ದರು.

ಸಂಪಾದಕೀಯ ನಿಲುವು

ಇದರಿಂದ ‘ಗಣಿ ಮಾಫಿಯಾಗಳಿಗೆ ಕಾನೂನಿನ ಭಯವಿಲ್ಲ’, ಎಂಬುದು ಕಂಡುಬರುತ್ತದೆ. ಸರಕಾರ ಅಂತಹವರ ವಿರುದ್ಧ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು !