ಭಾರತದಲ್ಲಿ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ವರದಿ


ಹೊಸ ದೆಹಲಿ – ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ಮಂಕಿಪಾಕ್ಸ್‌’ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸಂಬಂಧಿತ ವ್ಯಕ್ತಿ ಮೇ ೧೩ರಂದು ದುಬೈನಿಂದ ಭಾರತಕ್ಕೆ ಮರಳಿದ್ದ. ಇದೀಗ ೨ ತಿಂಗಳ ಬಳಿಕ ಆ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ. ಕೆಲ ದಿನಗಳ ಹಿಂದೆ ವಿದೇಶದಿಂದ ಕೇರಳಕ್ಕೆ ಮರಳಿದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಲ್ಲಿಯವರೆಗೆ ವಿಶ್ವದಾದ್ಯಂತ ೨೭ ದೇಶಗಳಲ್ಲಿ ಒಟ್ಟು ೮೦೦ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಸೋಂಕು ಕೊರೋನಾ ಸಾಂಕ್ರಾಮಿಕದಷ್ಟು ಮಾರಣಾಂತಿಕವಲ್ಲ ಮತ್ತು ಇದು ಕೊರೋನಾ ವೈರಾಣು ಅಷ್ಟು ವೇಗವಾಗಿ ಹರಡುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಈ ಸೋಂಕಿನಿಂದ ಇಲ್ಲಿಯವರೆಗೆ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ.

ಮಂಕಿಪಾಕ್ಸ್‌ನ ಲಕ್ಷಣಗಳೇನು?

ಮಂಕಿಪಾಕ್ಸ್‌ ಸೋಂಕಿತ ರೋಗಿಗಳಲ್ಲಿ ಜ್ವರ, ತೀವ್ರ ತಲೆನೋವು, ದೇಹದ ಊತ ಮತ್ತು ಆಯಾಸದ ಲಕ್ಷಣಗಳು ಕಂಡು ಬರುತ್ತವೆ.