ಸಿವಾನ : ಶಿವ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ೨ ಮಹಿಳೆಯರು ಬಲಿ, ಗಾಯಗೊಂಡ ಅನೇಕ ಭಕ್ತರು

ಸಿವಾನ (ಬಿಹಾರ) : ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಅಲ್ಲಿ ಬಾಬಾ ಮಹೇಂದ್ರನಾಥ ಶಿವ ದೇವಸ್ಥಾನದಲ್ಲಿ ಮೊದಲನೆಯ ಶ್ರಾವಣ ಸೋಮವಾರದ ಪ್ರಯುಕ್ತ ಅಲ್ಲಿ ಜನಜಂಗುಳಿ ಇತ್ತು. ಜಲಾಭಿಷೇಕದ ಸಮಯದಲ್ಲಿ ನಡೆದ ಕಾಲ್ತುಳಿತದಲ್ಲಿ ೨ ಮಹಿಳೆಯರ ಸಾವನ್ನಪ್ಪಿದರು ಹಾಗೂ ಹಲವು ಭಕ್ತರು ಗಾಯಗೊಂಡರು. ಗಾಯಗೊಂಡವರ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಘಟನೆಯ ನಂತರ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.