ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವುದಕ್ಕಾಗಿ ಇಸ್ಲಾಮಿ ದೇಶದಿಂದ ‘ಪಿ.ಎಫ್.ಐ.’ಗೆ ಹಣ ಪೂರೈಕೆ !

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಪುಲವಾರಿ ಶರೀಫದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೩ ಕಾರ್ಯಕರ್ತರನ್ನು ಇತ್ತಿಚೆಗೆ ಬಂಧಿಸಕಾಗಿತ್ತು. ಅವರಿಂದ ಸಿಕ್ಕಿರುವ ಸಾಹಿತ್ಯಗಳಿಂದ ೨೦೪೭ ರ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಷಡ್ಯಂತ್ರ ಬೆಳಕಿಗೆ ಬಂದಿದೆ. ಈ ಮೂವರ ವಿಚಾರಣೆಯಲ್ಲಿ, ತುರ್ಕಿ ದೇಶ ಸೇರಿದಂತೆ ಅನೇಕ ಇಸ್ಲಾಮಿ ದೇಶದಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಹಣ ಪೂರೈಕೆ ಮಾಡಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

೧. ಬಂಧಿಸಲಾಗಿರುವ ಭಯೋತ್ಪಾದಕ ದಾನೀಶನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ‘ತಹರಿಕ-ಏ-ಲಬ್ಬೈಕ ಪಾಕಿಸ್ತಾನ’ದ ಜೊತೆ ಸಂಬಂಧವಿದೆ. ಆತ ಪಾಕಿಸ್ತಾನದ ಫೈಜಾನ ಎಂಬ ವ್ಯಕ್ತಿಯ ಜೊತೆ ಸತತ ಸಂಪರ್ಕದಲ್ಲಿ ಇದ್ದನು.

೨. ಪಿ.ಎಫ್.ಐ. ಸಂಘಟನೆಯಲ್ಲಿ ಒಂದು ಪುಸ್ತಕದ ವಿತರಣೆ ಮಾಡಲಾಗುತ್ತಿತ್ತು. ಇದರಲ್ಲಿ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ವಿಷಯವಾಗಿ ಯೋಜನೆ ಇತ್ತು. ಅದರ ಪ್ರಕಾರ ಈ ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದರು. ಅವರು ಪಾಟಲಿಪುತ್ರದಲ್ಲಿ ಭಯೋತ್ಪಾದನೆಯ ಪ್ರಶಿಕ್ಷಣ ಕೇಂದ್ರ ನಡೆಸುತ್ತಿದ್ದರು.

ಸಂಪಾದಕೀಯ ನಿಲುವು

ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಜಿಹಾದಿ ಮುಸಲ್ಮಾನರ ಕನಸಾಗಿದೆ, ಇದೇನು ಹೊಸದಲ್ಲ. ಈಗ ಅನೇಕ ಇಸ್ಲಾಮಿ ದೇಶಗಳು ಭಾರತದ ಜಿಹಾದಿಗಳಿಗೆ ಶಸ್ತ್ರಸಜ್ಜಿತ ಕೃತ್ಯಗಳು ನಡೆಸಲು ಪ್ರೋತ್ಸಾಹ ನೀಡುತ್ತಿದ್ದಾರೆ ಹಾಗೂ ಹಣ ನೀಡುತ್ತಿದ್ದಾರೆ. ಆದ್ದರಿಂದ ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದಕ್ಕಾಗಿ ತಕ್ಷಣ ಕೃತಿ ಮಾಡುವುದು ಅವಶ್ಯಕವಾಗಿದೆ !

ವಿದೇಶದಿಂದ ಈ ರೀತಿ ಧನ ಸಹಾಯ ಜಿಹಾದಿಗಳಿಗಾಗಿ ಬರುತ್ತಿದೆ, ಇದು ಭದ್ರತಾ ವ್ಯವಸ್ಥೆಗಳಿಗೆ ಹೇಗೆ ಗಮನಕ್ಕೆ ಬರುತ್ತಿಲ್ಲ ? ಅಥವಾ ಅವುಗಳು ನಿದ್ದೆ ಮಾಡುತ್ತಿದ್ದಾರೆಯೇ ?

ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಯಾವಾಗ ನಿಷೇಧ ಹೇರುವುದು ? ಈ ಪ್ರಶ್ನೆ ಈಗ ಹಿಂದೂಗಳ ಮುಂದೆ ಇದೆ !