ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದೌರ್ಜನ್ಯದ ಬಗ್ಗೆ ಜಗತ್ತು ಮೌನ ಏಕೆ ವಹಿಸಿದೆ ? – ಗೀರ್ತ ವಿಲ್ಡರ್ಸ್

ಗೀರ್ತ ವಿಲ್ಡರ್ಸ್

ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಾಳಿ ಮುಂದುವರಿದಿದೆ. ಬಾಂಗ್ಲಾದೇಶದ ನರೆಲನಲ್ಲಿ ಹಿಂದೂಗಳ ಮೇಲೆ ಮತ್ತೆ ಮುಸ್ಲಿಮರ ದಾಳಿ ನಡೆದಿದೆ. ಅವರ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಜಗತ್ತು ಏಕೆ ಮೌನವಾಗಿದೆ ? ಹಿಂದೂಗಳ ಮೇಲಿನ ಇಸ್ಲಾಮಿಕ್ ಹಿಂಸಾಚಾರವು ಅವರಿಗೆ ಒಪ್ಪಿಗೆ ಇದೆಯೇ ? ಹಿಂದೂಗಳು ಭಾರತ ಅಥವಾ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ ಎಲ್ಲಿಯೂ ಶೋಷಣೆಗೆ ಒಳಗಾಗಬಾರದು, ಎಂದು ನೆದರ್‌ಲ್ಯಾಂಡ್ಸಿನ ರಾಷ್ಟ್ರೀಯ ರಾಜಕೀಯ ಪಕ್ಷ ‘ಪಾರ್ಟಿ ಫಾರ್ ಫ್ರೀಡಂ’ನ ಸಂಸ್ಥಾಪಕ ಮತ್ತು ಸಂಸದ ಗೀರ್ತ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ಸಮಯದಿಂದ ವಿಲ್ಡರ್ಸ್ ಭಾರತದಲ್ಲಿ ಹಿಂದೂಗಳ ರಕ್ಷಣೆಗಾಗಿ ವಿವಿಧ ಟ್ವೀಟ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇವರನ್ನು ಜಾಗತಿಕ ಸಮುದಾಯವು ‘ಇಸ್ಲಾಂನ ಕಟ್ಟರ ವಿರೋಧಿಗಳು’ ಎಂದು ನೋಡುತ್ತಾರೆ.

ಹಿಂದೂಗಳೇ, ಸ್ವರಕ್ಷಣೆಗಾಗಿ ಹೋರಾಡುವ ಎಲ್ಲ ಹಕ್ಕುಗಳು ನಿಮಗಿವೆ !

ಮತ್ತೊಂದು ಟ್ವೀಟ್‌ನಲ್ಲಿ ಗೀರ್ತ ವಿಲ್ಡರ್ಸ್ ಇವರು, ‘ಭಾರತದ ಹಿಂದೂಗಳೇ ನೀವು ನಿಮಗಾಗಿ, ಸ್ವರಕ್ಷಣೆಗಾಗಿ, ನಿಮ್ಮ ಮೌಲ್ಯಗಳು ಮತ್ತು ಸಂಸ್ಕೃತಿಗಾಗಿ ಮತ್ತು ನೂಪುರ್ ಶರ್ಮಾಗಾಗಿ ಹೋರಾಡಬೇಕು. ನಿಮಗೆ ಹಾಗೆ ಮಾಡಲು ಪೂರ್ಣ ಹಕ್ಕಿದೆ. ನೀವು ಇಸ್ಲಾಂ, ಸಾಂಸ್ಕೃತಿಕ ಸಾಪೇಕ್ಷತಾವಾದ, ಭ್ರಷ್ಟ ನ್ಯಾಯಾಧೀಶರು ಮತ್ತು ದುರ್ಬಲ ರಾಜಕಾರಣಿಗಳ ವಶವಾದರೆ, ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ ! ನಿರ್ಭೀತರಾಗಿರಿ ! ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ’ ಎಂದು ಹಿಂದೂಗಳಿಗೆ ಕಿವಿಮಾತು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಯಾವ ರಾಜಕಾರಣಿಯೂ ಇಂತಹ ಪ್ರಶ್ನೆ ಕೇಳುವುದಿಲ್ಲ. ಭಾರತದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಾಗಲೂ ಇಂತಹ ರಾಜಕಾರಣಿಗಳು ನಿಷ್ಕ್ರಿಯರಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !