ಗಲಭೆಯಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಮಹಿಳೆಗೆ ನೀಡಿದ್ದ ನಷ್ಟ ಪರಿಹಾರದ ಹಣವನ್ನು ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯರ ವಾಹನದ ಮೇಲೆ ಎಸೆದಳು !

ಸಿದ್ಧರಾಮಯ್ಯನವರು ಸಂತ್ರಸ್ತೆಗೆ ನಷ್ಟಪರಿಹಾರ ನೀಡಿದ್ದರು !

ಬಾಗಲಕೋಟೆ – ಇಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧಿ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಲಭೆಯ ಪ್ರಕರಣದಲ್ಲಿ ಗಾಯಗೊಂಡಿದ್ಧ ಮುಸಲ್ಮಾನ ಮಹಿಳೆಗೆ ೨ ಲಕ್ಷ ರೂಪಾಯಿ ಹಣ ನೀಡಿದಾಗ ಅವಳು ಆ ಹಣವನ್ನು ಸಿದ್ಧರಾಮಯ್ಯನವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದಳು. ಆ ಮಹಿಳೆಯು ‘ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಪಡಿಸಿರಿ’ ಎಂದು ಅವರಿಗೆ ಹೇಳಿದರು. ಈ ಗಲಭೆಯಲ್ಲಿ ೪ ಜನ ಮುಸಲ್ಮಾನರು ಗಾಯಗೊಂಡಿದ್ದರು.

(ಸೌಜನ್ಯ : Public TV)