ಸನಾತನ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿ ೩೨ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಮಂಗಳೂರು – ಸನಾತನ ಸಂಸ್ಥೆಯ ವತಿಯಿಂದ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಬಾಗಲಕೋಟೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ೩೨ ಸ್ಥಳಗಳಲ್ಲಿ ಜುಲೈ ೧೩, ೨೦೨೨ ರಂದು ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸಲಾಯಿತು.

ಮಹೋತ್ಸವದ ಆರಂಭದಲ್ಲಿ ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರ ಪೂಜೆಯನ್ನು ಮಾಡಲಾಯಿತು. ನಂತರ ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶವನ್ನು ಓದಲಾಯಿತು.

ತದನಂತರ ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ’ದ ಸ್ಥಾಪನೆಯ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ಮಾಡಲಾಯಿತು. ಈ ಸಮಯದಲ್ಲಿ ಸ್ವರಕ್ಷಣೆಯ ಪ್ರಾತ್ಯಕ್ಷಿಕೆಯನ್ನು ವೀಡಿಯೋ ಮೂಲಕ ತೋರಿಸಲಾಯಿತು.

ಬೆಂಗಳೂರಿನಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಗೌಡ, ಕಾರವಾರದ ಪೂ. ವಿನಾಯಕ ಕರ್ವೇ, ಮಂಗಳೂರಿನಲ್ಲಿ ಪೂ.(ಶ್ರೀಮತಿ) ರಾಧಾ ಪ್ರಭು ಹಾಗೂ ಬಾಲ ಸಂತ ಪೂ. ಭಾರ್ಗವರಾಮ ಪ್ರಭು, ಶಿವಮೊಗ್ಗದ ಸುಪ್ರಸಿದ್ಧ ಪಂಚ ಶಿಲ್ಪಕಾರರಾದ ಪೂ. ಕಾಶಿನಾಥ ಕೌಟೇಕರ ಇವರು ಉಪಸ್ಥಿತರಿದ್ದರು. ಇಡೀ ರಾಜ್ಯದಲ್ಲಿ ಸುಮಾರು ೪ ಸಾವಿರದ ೮೦೦ ಕ್ಕೂ ಹೆಚ್ಚು ಜನರು ಗುರುಪೂರ್ಣಿಮೆಯ ಲಾಭವನ್ನು ಪಡೆದರು.

(ಸೌಜನ್ಯ : Channel 9 Live)

ವೈಶಿಷ್ಟ್ಯಪೂರ್ಣ ಅಂಶಗಳು

೧. ಹಗರಿಬೊಮ್ಮನ ಹಳ್ಳಿಯಲ್ಲಿ ಒಬ್ಬ ಬಟ್ಟೆ ಅಂಗಡಿಯವರು ಬಿಳಿ ಬಟ್ಟೆಯ ಒಂದು ಪೂರ್ಣ ಥಾನನ್ನು ಗುರುಸೇವೆಗೆಂದು ಉಚಿತವಾಗಿ ಕೊಟ್ಟರು.

೨. ರಾಯಚೂರಿನಲ್ಲಿ ಆಗಮಿಸಿದ್ದ ಹಿಂದುತ್ವನಿಷ್ಠ ವಕ್ತಾರರಾದ ಶ್ರೀ. ಪ್ರಕಾಶ ಖೇಣಿದ ಇವರು ತಮ್ಮೊಂದಿಗೆ ಧರ್ಮಪ್ರೇಮಿಗಳಿಂದಲೂ ಅರ್ಪಣೆಯನ್ನು ಸಂಗ್ರಹಿಸಿ ತಂದಿದ್ದರು. ಪತ್ರಕರ್ತರೊಬ್ಬರು ತಾವಾಗಿ ಸ್ಥಳಿಯ ‘ಸಿಟಿ ಕೇಬಲ್ ಚಾನಲ್’ ನವರನ್ನು ಕರೆಸಿ ಗುರುಪೂರ್ಣಿಮೆಯ ಚಿತ್ರೀಕರಣ ಮಾಡಲು ಹೇಳಿದರು.

೩. ಧರ್ಮಪ್ರೇಮಿ ನ್ಯಾಯವಾದಿ ಶ್ರೀ. ವೀರನಾಯಣ ದೇಸಾಯಿಯವರು ೧೦೦ ಕಿ.ಮೀ ದೂರದಿಂದ ಬಂದು ವಾರ್ತೆ ಮತ್ತು ಗುರುಪೂರ್ಣಿಮೆ ಮಹೋತ್ಸವ ಮುಗಿಯುವವರೆಗೆ ಉಪಸ್ಥಿತರಿದ್ದರು.

೪. ರಾಜಾಜಿನಗರದಲ್ಲಿ(ಬೆಂಗಳೂರು) ‘ಗಣೇಶ್ ಸ್ಟುಡಿಯೋ’ದವರು ಒಂದು ಡಾಕ್ಯುಮೆಂಟರಿ ಮಾಡಿಕೊಳ್ಳುವ ದೃಷ್ಟಿಯಿಂದ ಗುರುಪೂರ್ಣಿಮೆಯ ಚಿತ್ರೀಕರಣ ಮಾಡಿದರು.

೫. ಬೆಳಗಾವಿಯ ರಾಮನಗರ ಕೇಂದ್ರದಲ್ಲಿನ ಪಂಚಾಯತ್ ಅಧಿಕಾರಿಗಳು ಗುರುಪೂರ್ಣಿಮೆಯ ಸಭಾಗೃಹಕ್ಕೆ ಬಂದಿದ್ದರು. ಅವರು ಸಭಾಗೃಹದ ಸ್ವಚ್ಛತೆಯನ್ನು ನೋಡಿ, “ನೀವು ಮಾಡಿದ ಸಭಾಗೃಹದ ಸ್ವಚ್ಛತೆಯನ್ನು ನೋಡಿ ಆನಂದವಾಗುತ್ತಿದೆ. ನೀವು ಇನ್ನು ಮುಂದೆ ಯಾವಾಗ ಬೇಕಾದರೂ ಈ ಸಭಾಗೃಹ ಬಳಕೆ ಮಾಡಬಹುದು” ಎಂದು ಹೇಳಿದರು.

ಕ್ಷಣಚಿತ್ರ

ಕುಮಟಾದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಆರಂಭವಾದನಂತರ ಒಂದು ಹಸು ಸಭಾಗೃಹಕ್ಕೆ ಬಂದು ತುಂಬಾ ಸಮಯ ಅಲ್ಲೇ ನಿಂತುಕೊಂಡಿತ್ತು. ಸಾಧಕರು ಅದಕ್ಕೆ ತಿನ್ನಲು ಕೊಟ್ಟರೂ ಅದು ಹೋಗಲಿಲ್ಲ, ಅದು ಕಿವಿಗೊಟ್ಟು ಗುರುಪೂರ್ಣಿಮೆಯ ಮಾರ್ಗದರ್ಶನ ಕೇಳುತ್ತಾ ನಿಂತಿತ್ತು ಎಂದು ಸಾಧಕರಿಗೆ ಅರಿವಾಯಿತು.

ಅಭಿಪ್ರಾಯ

೧. ಶ್ರೀ. ಎಸ್ ಭಾಸ್ಕರನ್, ಅಧ್ಯಕ್ಷರು, ವಿಶ್ವ ಸನಾತನ ಪರಿಷತ್, ಬೆಂಗಳೂರು – ಸಭಾಗೃಹದಲ್ಲಿನ ದೈವೀ ವಾತಾವರಣದಿಂದ ತುಂಬಾ ಸಕಾರಾತ್ಮಕತೆಯ ಅನುಭವವಾಗುತ್ತಿತ್ತು.

೨. ಶ್ರೀ. ಪ್ರಶಾಂತ ಸಂಬರಗಿ, ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕರು, ಬೆಂಗಳೂರು – ಯಾರಿಗಾದರೂ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಖಂಡಿತವಾಗಿಯೂ ಜೀವನದಲ್ಲಿ ಒಮ್ಮೆ ಗೋವಾದ ಸನಾತನ ಆಶ್ರಮಕ್ಕೆ ಭೇಟಿ ನೀಡಿರಿ ಎಂದು ಹೇಳಿದರು.

೩. ಶ್ರೀ. ರಾಜಶೇಖರ ಹೆಬ್ಬಾರ್, ಉಡುಪಿ – ಇಂದು ಸಮಾಜಕ್ಕೆ ಧರ್ಮಶಿಕ್ಷಣವನ್ನು ಕೊಡುವಂತ ಏಕೈಕ ಸಂಸ್ಥೆಯಿದ್ದರೆ ಅದು ಕೇವಲ ಸನಾತನ ಸಂಸ್ಥೆ ಮಾತ್ರ ಎಂದು ಹೇಳಿದರು !