ಮುಖ್ಯೋಪಾಧ್ಯಾಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರಿಂದ ಆಶ್ವಾಸನೆ !
(ಸಾಂದರ್ಭಿಕ ಚಿತ್ರ)
ರಾಂಚಿ (ಜಾರ್ಖಂಡ) – ರಾಜ್ಯದ ಗಿರಿಡಿಹ ಜಿಲ್ಲೆಯಲ್ಲಿರುವ ಪಲ್ಮೋ ಗ್ರಾಮದ ಸರಕಾರಿ ಶಾಲೆಯ ೪ ನೇ ತರಗತಿಯ ವಿದ್ಯಾರ್ಥಿಯು ಕೊಠಡಿಯ ಫಲಕದ ಮೇಲೆ ಜೈ ಶ್ರೀ ರಾಮ ಬರೆದಿರುವುದಕ್ಕಾಗಿ ಆತನನ್ನು ಹಿಗ್ಗಮುಗ್ಗ ಥಳಿಸಲಾಗಿದೆ. ಸ್ಥಳೀಯ ಮಾಧ್ಯಮದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಅಪಗ್ರೇಡೆಡ್ ಗೌರ್ಮೆಂಟ್ ಮಿಡಲ್ ಸ್ಕೂಲ್, ಪಲ್ಮೋ ದ ಮುಖ್ಯೋಪಾಧ್ಯಾಯ ಮಹಮ್ಮದ್ ಅಬೂಲ್ ಕಲಾಂ ಜುಲೈ ೯ ರಂದು ಈ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮತ್ತೆ ಥಳಿತಕ್ಕೆ ಒಳಗಾಗುವ ಭೀತಿಯಲ್ಲಿ ಹುಡುಗ ಅವನ ಪೋಷಕರಿಗೆ ನಡೆದಿರುವ ಘಟನೆಯ ಬಗ್ಗೆ ಹೇಳಿರಲಿಲ್ಲ. ಆದರೆ ಪೋಷಕರು ಮೇಲಿಂದ ಮೇಲೆ ವಿಚಾರಿಸಿದ ನಂತರ ಅವನು ನಡೆದಿರುವ ಘಟನೆ ಬಗ್ಗೆ ತಿಳಿಸಿದನು.
Jharkhand: State-run school’s headmaster Abul Kalam thrashes class 4 student for writing ‘Jai Shri Ram’ on blackboardhttps://t.co/uxGZ2RNqfW
— OpIndia.com (@OpIndia_com) July 14, 2022
ಅದರ ನಂತರ ಜುಲೈ ೧೩ ರಂದು ಗ್ರಾಮಸ್ಥರು ಶಾಲೆಯಲ್ಲಿ ಪಂಚಾಯತಿ ಸದಸ್ಯರ ಉಪಸ್ಥಿತಿಯಲ್ಲಿ ಒಂದು ಬೈಠಕ ಕರೆದರು. ಬೈಠಕ್ ಸಮಯದಲ್ಲಿ ಅನೇಕ ಪೋಷಕರು ಮಹಮ್ಮದ್ ಅಬೂಲ್ ಕಲಾಂ ಇವರ ಮೇಲೆ ಮಕ್ಕಳಿಗೆ ಶಾಲೆಯಲ್ಲಿನ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸುತ್ತಿರುವುದಾಗಿ ಆರೋಪ ಹೊರಿಸಿದ್ದಾರೆ. ಗ್ರಾಮಸ್ಥರು ಸಂತಪ್ತರಾಗಿರುವುದು ಕಂಡು ಗ್ರಾಮ ಪಂಚಾಯತಿ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಗೆ ಇದರ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ವಿಚಾರಣೆಯ ಆದೇಶ ನೀಡಿದ್ದಾರೆ ಮತ್ತು ತಪ್ಪಿತಸ್ಥವೆಂದು ತಿಳಿದು ಬಂದರೆ ಮುಖ್ಯೋಪಾಧ್ಯಾಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ.
ಸಂಪಾದಕೀಯ ನಿಲುವುಮತಾಂಧರು ಯಾವುದೇ ಸ್ಥಾನದಲ್ಲಿದ್ದರೂ, ಅವರಲ್ಲಿರುವ ಮೂಲಭೂತವಾದಿ ವಿಚಾರಗಳಿಂದ ಅವರು ಸಣ್ಣ ಮಕ್ಕಳನ್ನೂ ಬಿಡುವುದಿಲ್ಲ ಎಂಬುವುದಕ್ಕೆ ಇದು ಒಂದು ಉದಾಹರಣೆ ! |