ಔರಂಗಜೇಬನು ದೇವಸ್ಥಾನ ಕೆಡವುದಕ್ಕೆ ಆದೇಶ ನೀಡಿದ್ದ, ಮಸೀದಿ ಕಟ್ಟುವುದಕ್ಕಲ್ಲ ! – ನ್ಯಾಯವಾದಿ ವಿಜಯ ಶಂಕರ ರಸ್ತೋಗಿ

ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಕಾಶಿ ವಿಶ್ವೇಶ್ವರ ಮಂದಿರ – ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ

ಪ್ರಯಾಗರಾಜ – ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ ಪಡಿಯಾ ಇವರ ಖಂಡಪೀಠದ ಮುಂದೆ ಅಂಜುಮನ್ ಏ ಇಂತಜಾಮಿಯಾ ಮಸೀದಿ ಸಮಿತಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರು ದಾಖಲಿಸಿರುವ ಮನವಿಯ ಮೇಲೆ ಜುಲೈ ೧೩ ರಂದು ವಿಚಾರಣೆ ನಡೆಯಿತು. ಆ ಸಮಯದಲ್ಲಿ ದೇವಸ್ಥಾನದ ವತಿಯಿಂದ ಅವರ ವಾದ ಮಂಡಿಸಲು ನ್ಯಾಯವಾದಿ ವಿಜಯ ಶಂಕರ ರಸ್ತೋಗಿ ಇವರು ದಾಖಲೆಗಳನ್ನು ಸಲ್ಲಿಸಿ ವಸ್ತುಸ್ಥಿತಿಯನ್ನು ಮಂಡಿಸಿದರು. ಅವರು ಔರಂಗಜೇಬನು ‘ಶ್ರೀ ವಿಶ್ವನಾಥ ದೇವಸ್ಥಾನ ಕೆಡುವಲು ಆದೇಶ ನೀಡಿದ್ದ, ಆದರೆ ಅಲ್ಲಿ ಮಸೀದಿ ಕಟ್ಟಲು ಯಾವುದೇ ಆದೇಶ ಹೊರಡಿಸಿರಲಿಲ್ಲ. ಆದ್ದರಿಂದ ಅಲ್ಲಿ ಮಸೀದಿ ಕಟ್ಟುವುದು ತಪ್ಪು’ ಎಂದು ವಾದ ಮಂಡಿಸಿದರು. ನ್ಯಾಯವಾದಿ ರಸ್ತೋಗಿ ಪ್ರಕಾರ, ಔರಂಗಜೇಬಿನ ಆದೇಶದಂತೆ ಮೊದಲಿಗೆ ವಿಶ್ವನಾಥನ ದೇವಸ್ಥಾನ ಕೆಡವಿ ಮಸೀದಿ ಕಟ್ಟಲಾಯಿತು, ಆದರೆ ಭೂಮಿಯ ಒಡೆತನ ದೇವಸ್ಥಾನದ ಹತ್ತಿರ ಉಳಿಯಿತು. ಹಳೆಯ ದಾಖಲೆಗಳು ನೋಡಿದರೆ ದೇವಸ್ಥಾನ ಅನಾದಿಕಾಲದಿಂದಿರುವುದು ಸ್ಪಷ್ಟವಾಗುತ್ತದೆ.

ನ್ಯಾಯವಾದಿ ರಸ್ತೋಗಿ ಮಾತು ಮುಂದುವರಿಸಿ, ಮೊದಲಿನ ಸಾಮ್ರಾಜ್ಯದಲ್ಲಿ ತಪ್ಪುಗಳು ಆಗಿವೆ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಬಲಪೂರ್ವಕವಾಗಿ ಕೆಡವಲಾಗಿದೆ, ಸದ್ಯದ ಸರಕಾರ ಈ ವಿಷಯದಲ್ಲಿ ಸಾಕ್ಷಿ ಪ್ರಸ್ತುತಪಡಿಸಿ ತಪ್ಪು ಸುಧಾರಿಸಲು ಇಚ್ಚಿಸುತ್ತದೆ, ಆಗ ನ್ಯಾಯಾಲಯ ಆ ತಪ್ಪನ್ನು ನೋಂದಾಯಿಸಿ ಉಪಾಯದ ಆದೇಶ ನೀಡಬಹುದು. ಸರ್ವೋಚ್ಚ ನ್ಯಾಯಾಲಯವು ರಾಮಜನ್ಮ ಭೂಮಿ ಪ್ರಕರಣದಲ್ಲಿ ಇಂತಹ ಸೂಚನೆ ನೀಡಿತು ಮತ್ತು ಈ ಪ್ರಕರಣದಲ್ಲಿಯೂ ಅದೇ ಆಗಬಹುದು, ಎಂದು ರಸ್ತೋಗಿ ಇವರು ಹೇಳಿದರು. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ ೧೫- ೨೦೨೨ ರಂದು ನಡೆಯುವುದು.

ಸಂಪಾದಕೀಯ ನಿಲುವು

ಈಗ ಸರಕಾರವು ಈ ವಿಷಯದಲ್ಲಿ ಸಾಕ್ಷಿಗಳನ್ನು ಜನರೆದುರು ತಂದು ದೇವಸ್ಥಾನ ಮತ್ತೆ ಕಟ್ಟುವುದಕ್ಕಾಗಿ ಪ್ರಯತ್ನ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.