ಕನ್ನೂರ (ಕೇರಳ)ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಯ ಮೇಲೆ ದುಶ್ಕರ್ಮಿಗಳಿಂದ ಬಾಂಬ್ ಎಸೆತ

ಕನ್ನೂರ (ಕೇರಳ) – ಕನ್ನೂರಿನ ಪಯ್ಯಾನುರಿನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಯ ಮೇಲೆ ಜುಲೈ ೧೨ ರಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ ಎಸೆದಿದ್ದಾನೆ. ಇದರಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ; ಆದರೆ ಇದರಿಂದ ಕಟ್ಟಡದ ಗಾಜು ಒಡೆದು ಕಚೇರಿಯ ಪೀಠೋಪಕರಣಗಳಿಗೆ ಹಾನಿ ಸಂಭವಿಸಿದೆ. ಪೊಲೀಸರು ಸಿಸಿಟಿವಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ನೇತೃತ್ವದ ಸರಕಾರ ಇರುವುದರಿಂದ ಹಿಂದೂಗಳು ಮತ್ತು ಅವರ ಸಂಘಟನೆಗಳನ್ನು ಗುರಿಯಾಗಿಸಲಾಗುತ್ತಿದೆ, ಈ ವಿಷಯದ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ) ಪರರು ಎಂದಿಗೂ ಮಾತನಾಡುವದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !