ಪಕ್ಷದ ಕಾರ್ಯಾಲಯದಲ್ಲಿಯೇ ೨ ಗುಂಪುಗಳಲ್ಲಿ ಹೊಡೆದಾಟ
ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿರುವ ಅಖಿಲ ಭಾರತೀಯ ಅಣ್ಣಾ ದ್ರವಿಡ ಮುನ್ನೇತ್ರ ಕಳಘಮ್ (ಅಖಿಲ ಭಾರತೀಯ ಅಣ್ಣಾ ದ್ರವಿಡ ಪ್ರಗತಿ ಸಂಘ) ಈ ಪಕ್ಷದ ಅಧ್ಯಕ್ಷಸ್ಥಾನದ ಬಗ್ಗೆ ಓ. ಪನೀರಸೆಲ್ವಮ್ ಹಾಗೂ ಕೆ. ಪಲಾನಿಸ್ವಾಮಿಯವರ ಗುಂಪುಗಳ ನಡುವೆ ಪೈಪೋಟಿ ನಡೆಯುತ್ತಿದೆ. ಪನೀರಸೆಲ್ವಮ್‌ರವರಿಗೆ ಮದ್ರಾಸ ಉಚ್ಚ ನ್ಯಾಯಾಲಯವು ಪಕ್ಷದ ಭವಿಷ್ಯದಲ್ಲಿನ ನೇತೃತ್ವದ ಚೌಕಟ್ಟನ್ನು ಸಿದ್ಧಪಡಿಸಲು ‘ಜನರಲ ಕೌನ್ಸಿಲ್’ನ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಕೆ. ಪಲಾನಿಸ್ವಾಮಿಯವರ ನೇತೃತ್ವದ ಗುಂಪಿನಿಂದ ಕರೆಸಲಾದ ಸಭೆಯನ್ನು ಸ್ಥಗಿತಗೊಳಿಸುವ ಬಗ್ಗೆ ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಇನ್ನೊಂದು ಕಡೆಯಲ್ಲಿ ಚೆನ್ನೈಯಲ್ಲಿ ಪಲಾನಿಸ್ವಾಮಿ ಹಾಗೂ ಪನೀರಸೆಲ್ವಮ್‌ರವರ ಗುಂಪುಗಳ ನಡುವೆ ಹೊಡೆದಾಟ ನಡೆಯಿತು. ಇದರಲ್ಲಿ ಅನೇಕ ಕಾರ್ಯಕರ್ತರು ಗಾಯಗೊಂಡಿರುವ ಬಗ್ಗೆ ಹೇಳಲಾಗಿದೆ. ‘ಜನರಲ್ ಕೌನ್ಸಿಲ್’ನ ಸಭೆಯ ಮೊದಲು ಪನೀರಸೆಲ್ವಮ್‌ರವರ ಸಮರ್ಥಕರು ಪಕ್ಷದ ಕಾರ್ಯಾಲಯದ ಬಾಗಿಲನ್ನು ಒಡೆದುಹಾಕಿದ್ದಾರೆ. ಸಮರ್ಥಕರು ಲಾಠಿಗಳನ್ನು ಹಿಡಿದು ಕಾರ್ಯಾಲಯವನ್ನು ತಲುಪಿದರು. ಅವರು ಘೋಷಣೆಗಳನ್ನು ಕೂಗಿದರು.