ಆದಿಶಂಕರಚಾರ್ಯ ಇವರ ಪುತ್ತಳಿಯ ಕಾಮಗಾರಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ತಡಯಾಜ್ಞೆ

ಮಧ್ಯಪ್ರದೇಶ ಉಚ್ಚ ನ್ಯಾಯಾಲಯ

ಭೋಪಾಲ (ಮಧ್ಯ ಪ್ರದೇಶ) – ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ೫೪ ಅಡಿ ಎತ್ತರದ ವ್ಯಾಸ ಪೀಠದ ಮೇಲೆ ಸ್ಥಾಪಿಸಲಾಗುವ ಆದಿ ಶಂಕರಚಾರ್ಯರ ೧೦೮ ಅಡಿ ಎತ್ತರದ ಪುತ್ತಳಿಯ ಕಾಮಗಾರಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಸ್ಥಗಿತಗೊಳಿಸಲಾಗಿದೆ. ನಿಸರ್ಗದ ಹಾನಿ ಮತ್ತು ಸ್ಥಳೀಯ ಜನರ ಶ್ರದ್ಧೆಯ ಬಗ್ಗೆ ದುರ್ಲಕ್ಷ ಮಾಡಿರುವ ಹಿನ್ನಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರವಿ ಮಲಿಮಠ ಮತ್ತು ನ್ಯಾಯಮೂರ್ತಿ ವಿಶಾಲ ಮಿಶ್ರಾ ಇವರ ನ್ಯಾಯ ಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಉತ್ತರ ಕೇಳಲಾಗಿದೆ.

ಮಧ್ಯ ಪ್ರದೇಶದ ಭಾಜಪ ಆಡಳಿತದ ಮಹತ್ವಾಕಾಂಕ್ಷಿ ಪ್ರಕಲ್ಪ ಇರುವ ‘ಸ್ಟ್ಯಾಚು ಆಫ್ ಒನ್‌ನೆಸ್’ (ಏಕತೆಯ ಪುತ್ತಳಿ – ಆದಿ ಶಂಕರಾಚಾರ್ಯ) ಇದರ ಕಾಮಗಾರಿಗೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ. ಅರ್ಜಿದಾರರು ‘ಲೋಕಹಿತ ಅಭಿಯಾನ ಸಮಿತಿ’ ಈ ಇಂದೂರದಲ್ಲಿರುವ ಸ್ವಯಂ ಸೇವೆ ಸಂಘಟನೆಯು ಮರಗಳನ್ನು ಕತ್ತರಿಸುವ ಮತ್ತು ಬೆಟ್ಟಗಳನ್ನು ಅಗೆಯಲು ವಿರೋಧಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ಖಂಡ್ವಾ ಜಿಲ್ಲಾಧಿಕಾರಿ, ಜಿಲ್ಹಾ ಅರಣ್ಯಾಧಿಕಾರಿ, ಕಂದಾಯ ಅಧಿಕಾರಿ ಮತ್ತು ರಾಜ್ಯ ಪುರಾತತ್ವ ಇಲಾಖೆ ಇವರಿಂದ ಕೂಡ ಉತ್ತರ ಕೇಳಿದ್ದಾರೆ.

ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರ ನೇತೃತ್ವದ ಮಂತ್ರಿ ಮಂಡಳಿಯು ಓಂಕಾರೇಶ್ವರದಲ್ಲಿ ೨ ಸಾವಿರ ೧೪೧ ಕೋಟಿ ರೂಪಾಯಿ ಖರ್ಚು ಮಾಡಿ ಆದಿಶಂಕರ ಆಚಾರ್ಯರ ೧೦೮ ಅಡಿ ಎತ್ತರದ ಪುತ್ತಳಿ ಹಾಗೂ ಅವರಿಗೆ ಸಮರ್ಪಿತ ಸಂಗ್ರಹಾಲಯ ಮತ್ತು ಅಂತರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥೆ ನಿರ್ಮಾಣದ ಪ್ರಸ್ತಾಪನೆಗೆ ಸಮ್ಮತಿ ನೀಡಿದ್ದರು.