ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಆದರೆ ಹಿಂದೂಗಳ ಚಿಕ್ಕ ಗುಂಪಿನ ಅತ್ಯಾಚಾರದಿಂದ ಅವರು ಇಸ್ಲಾಂ ಸ್ವೀಕರಿಸಿದರು ! – ಅಸ್ಸಾಮಿನ ಶಾಸಕ ಬದ್ರುದ್ದೀನ್ ಅಜ್ಮಲ್

ಧುಬರಿ (ಅಸ್ಸಾಂ) : ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಹಿಂದೂಗಳ ಒಂದು ಚಿಕ್ಕ ಸಮೂಹದಿಂದ ನಡೆದಿರುವ ಅತ್ಯಾಚಾರದಿಂದ ನಮ್ಮ ಪೂರ್ವಜರು ಇಸ್ಲಾಂ ಸ್ವೀಕರಿಸಿದರು. ಅದಕ್ಕಾಗಿ ನಮ್ಮ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಬದ್ರುದ್ದೀನ್ ಅಜ್ಮಲ್ ಸ್ಪಷ್ಟೀಕರಣ ನೀಡಿದರು. ಎರಡು ದಿನಗಳ ಹಿಂದೆ ಇವರು ಮುಸಲ್ಮಾನರಿಗೆ ಬಕ್ರೀದ್ ದಿನದಂದು ಗೋ ಹತ್ಯೆ ಮಾಡದಿರುವ ಕರೆ ನೀಡಿದ್ದರು.

೧. ಅಜ್ಮಲ್ ಮಾತು ಮುಂದುವರೆಸುತ್ತಾ, ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರ ಹಿಂದೂ ರಾಷ್ಟ್ರದ ಅಜೆಂಡಾ (ಕಾರ್ಯಸೂಚಿ) ಕೇವಲ ರಾಜಕೀಯ ನಾಟಕವಾಗಿದೆ. ಅದರ ಮೂಲಕ ಅವರಿಗೆ ಹಿಂದೂಗಳ ಶೇಕಡ ೫ ಮತಗಳು ಪಡೆಯುವ ಇರಾದೆ ಇದೆ. ಹಿಂದೂ ರಾಷ್ಟ್ರ ಒಂದು ಕನಸಾಗಿಯೇ ಉಳಿಯುವುದಿದೆ.

೨. ನೂಪುರ ಶರ್ಮಾ ಪ್ರಕರಣದ ಬಗ್ಗೆ ಅಜ್ಮಲ್, ನೂಪುರ ಶರ್ಮಾ ಇವರ ವಿರುದ್ಧ ಕೆಲವು ಮೂಲಭೂತವಾದಿ ಮುಸಲ್ಮಾನರು ಬೇಜವಾಬ್ದಾರಿಯ ಭೂಮಿಕೆ ವಹಿಸಿದ್ದಾರೆ. ಶಿರಚ್ಛೇದ ಮಾಡುವ ಬೆದರಿಕೆ ನೀಡುವ ಮೂರ್ಖತನ ಮಾಡುತ್ತಾರೆ, ಈ ರೀತಿ ಬೆದರಿಕೆ ನೀಡುವುದು ಇಸ್ಲಾಮಿನ ವಿರುದ್ಧವಾಗಿದೆ. ಮಹಮದ್ ಪೈಗಂಬರ್ ಇವರಿಗೆ ಕಲ್ಲು ಹೊಡೆಯಲಾಗಿತ್ತು ಆಗ ಏನಾದರೂ ಅಲ್ಲಾಹ್ ಆ ಕಲ್ಲು ಎಸೆದವರನ್ನು ಕೊಂದ್ದಿದರೆ ಇಸ್ಲಾಂ ಇಷ್ಟು ಬೆಳೆಯುತ್ತಿತ್ತೆ? ಇಂದು ಪ್ರಪಂಚದಲ್ಲಿ ೨೦೦ ಕೋಟಿ ಮುಸಲ್ಮಾನರು ಇದ್ದರೆ. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಅವರು ಇಸ್ಲಾಮಿನ ಒಳ್ಳೆಯ ವಿಚಾರಗಳಿಂದ ಮತಾಂತರ ಹೊಂದಿದರು.