ಕಾಂಗ್ರೆಸ್ ನಾಯಕ ರಾಜ್ ಬಬ್ಬರ ಇವರಿಗೆ ೨೬ ವರ್ಷಗಳ ನಂತರ ಎರಡು ವರ್ಷ ಜೈಲು ಶಿಕ್ಷೆ

ಮತದಾನದ ಸಮಯದಲ್ಲಿ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಚಲನಚಿತ್ರ ನಟ ಮತ್ತು ಕಾಂಗ್ರೆಸ್ಸಿನ ನಾಯಕ ರಾಜ್ ಬಬ್ಬರ್ ಇವರಿಗೆ ಸರಕಾರಿ ಕಾರ್ಯದಲ್ಲಿ ಅಡ್ಡಿ ತರುವುದು ಮತ್ತು ಹಲ್ಲೆ ನಡೆಸಿದ ಅಪರಾಧಕ್ಕಾಗಿ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ೮ ಸಾವಿರ ೫೦೦ ರೂಪಾಯಿಯ ದಂಡ ವಿಧಿಸಿದೆ. ಆದರೆ ನಂತರ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು. ಈ ವಿಚಾರಣೆಯ ವೇಳೆ ರಾಜ ಬಬ್ಬರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ರಾಜ್ ಬಬ್ಬರ್ ಇವರು ಮೆ ೨, ೧೯೯೬ ರಂದು ಚುನಾವಣೆಯ ಸಮಯದಲ್ಲಿ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದರು. ಆ ಸಮಯದಲ್ಲಿ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಗಿದ್ದರು.

ಸಂಪಾದಕೀಯ ನಿಲುವು

೨೬ ವರ್ಷಗಳ ನಂತರ ಸಿಗುವ ನ್ಯಾಯ ಇದು ಅನ್ಯಾಯವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!