|
ಜೈಪುರ – ಅಜಮೆರ ದರ್ಗಾದ ಕರ್ಮಚಾರಿ ಸಲ್ಮಾನ್ ಚಿಸ್ತಿ ಎಂಬವನು ನೂಪುರ ಶರ್ಮ ಇವರ ಶಿರಚ್ಛೇದ ನಡೆಸುವವರಿಗೆ ಸ್ವಂತ ಮನೆ ನೀಡುವ ಪ್ರಚೋದನಕಾರಿ ಕರೆ ನೀಡಿ ವಿಡಿಯೋ ತಯಾರಿಸಿದ್ದನು. ಈ ವಿಷಯಕ್ಕೆ ಆದ ವಿರೋಧದ ನಂತರ ಅಜ್ಮೀರ್ ಪೊಲೀಸ್ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರು ಚಿಸ್ತಿ ಇವನನ್ನು ಬಂಧಿಸಿದ್ದರು. ಅವನಿಗೆ ಬಂಧಿಸಿ ಕರೆದುಕೊಂಡು ಹೋಗುವಾಗ ತಯಾರಿಸಲಾದ ಒಂದು ವೀಡಿಯೋ ಭಾಜಪದ ನಾಯಕರು ಪ್ರಸಾರಗೊಳಿಸಿದರು. ಈ ವೀಡಿಯೋದಲ್ಲಿ ಪೊಲೀಸ್ ಉಪ ಆಯುಕ್ತ ಸಂದೀಪ ಸಾರಸ್ವತ ಇವರು ಚಿಸ್ತಿ ಇವನಿಗೆ ಆಕ್ಷೇಪಾರ್ಯ ವೀಡಿಯೋ ಮಾಡುವಾಗ ನಾನು ಮದ್ಯದ ನಶೆಯಲ್ಲಿದ್ದೆ ಎಂದು ಹೇಳು, ಆಗ ನಿನ್ನನ್ನು ರಕ್ಷಿಸಬಹುದು ಎಂದು ಸಲಹೆ ನೀಡುವುದು ಕಾಣುತ್ತಿದೆ. ಅದರ ನಂತರ ಪೊಲೀಸರು ಚಿಸ್ತಿ ಮಧ್ಯದ ನಶೆಯಲ್ಲಿದ್ದನು ಎಂದು ಸುದ್ದಿ ಹರಡಿದರು.
#WATCH | Rajasthan: In a viral video, Ajmer Sharif Dargah CO Sandeep Saraswat seen asking accused Salman Chishti,”which intoxication did you take while making the video,” adding, “say you were intoxicated to get saved.”
CO Sandeep Saraswat is now awaiting posting order: Ajmer SP https://t.co/i0KCkImHMx pic.twitter.com/9Va468HTi2
— ANI MP/CG/Rajasthan (@ANI_MP_CG_RJ) July 7, 2022
ಈ ಘಟನೆಯಿಂದ ಸಾರಸ್ವತ ಇವರನ್ನು ಪದಚ್ಯುತಗೊಳಿಸಲಾಗಿದ್ದು. ಪ್ರಸ್ತುತ ಅವರನ್ನು ಪದದ ನಿರೀಕ್ಷೆಯಲ್ಲಿರುವವರ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜಸ್ಥಾನ ಸರ್ಕಾರ ಸಾರಸ್ವತ ಇವರ ಘಟನೆಯ ವಿಚಾರಣೆಯ ಆದೇಶ ನೀಡಿದ್ದಾರೆ.
ಸಂಪಾದಕೀಯ ನಿಲುವು
|