|
ಈ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ
ಟೊರೊಂಟೊ (ಕೆನಡಾ) – ಲೀನಾ ಮಣಿಮೇಕಲೈ ಅವರ ‘ಕಾಳಿ’ ಸಾಕ್ಷ್ಯಚಿತ್ರದ ಭಿತ್ತಿ ಪತ್ರವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ಶ್ರೀ ಮಹಾಕಾಳಿದೇವಿಯ ವೇಷದಲ್ಲಿರುವ ನಟಿಯೊಬ್ಬರು ಸಿಗರೇಟ ಸೇದುತ್ತಿರುವುದನ್ನು ತೋರಿಸಿದಾಗಿನಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಟೊರೊಂಟೊದಲ್ಲಿಯ ‘ಕೆನಡಾ ಫಿಲ್ಮ ಫೆಸ್ಟಿವಲ್’ನಲ್ಲಿ ಈ ಭಿತ್ತಿಪತ್ರವು ಪ್ರಕಟವಾದಾಗಿನಿಂದ ಅದು ಇಲ್ಲಿಯ ಆಗಾ ಖಾನ ಸಂಗ್ರಹಾಲಯದಲ್ಲಿ ಇಡಲಾಗಿದೆ. ಈ ವಿಷಯದಲ್ಲಿ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಕೆನಡಾದ ಅಧಿಕಾರಿಗಳು ಮತ್ತು ‘ಫಿಲ್ಮ ಫೆಸ್ಟಿವಲ್’ನ ಆಯೊಜಕರನ್ನು ಆಗಾ ಖಾನ ಸಂಗ್ರಹಾಲಯದಿಂದ ಈ ಭಿತ್ತಿಪತ್ರವನ್ನು ತೆಗೆಯುವಂತೆ ಹೆಳಲಾಗಿದೆ.
Please see a Press Released issued by @HCI_Ottawa @MEAIndia @IndianDiplomacy @PIB_India @DDNewslive @IndiainToronto @cgivancouver pic.twitter.com/DGjQynxYJS
— India in Canada (@HCI_Ottawa) July 4, 2022
ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ಭಿತ್ತಿಪತ್ರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನಮಗೆ ಹಲವು ದೂರುಗಳು ಬಂದಿವೆ. ಸಂಬಂಧಪಟ್ಟ ಭಿತ್ತಿಪತ್ರಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ. ನಾವು ನಮ್ಮ ಭಾವನೆಗಳನ್ನು ಕಾರ್ಯಕ್ರಮದ ಆಯೋಜಕರಿಗೆ ತಲುಪಿಸಿದ್ದೇವೆ. ನಾವು ಕೆನಡಾದ ಅಧಿಕಾರಿಗಳಲ್ಲಿ, ಅವರು ಅಕ್ಷೇಪಾರ್ಹ ಭಿತ್ತಿಪತ್ರವನ್ನು ತಕ್ಷಣವೇ ತೆಗೆದು ಹಾಕಬೇಕು ಎಂದು ಮನವಿ ಮಾಡುತ್ತೇವೆ.