ಭಾರತೀಯ ನ್ಯಾಯವ್ಯವಸ್ಥೆಗೆ ಕರಿದಿನ ! – ಆನಂದ ರಂಗನಾಥನ್

ಹೊಸ ದೆಹಲಿ – ಇಂದಿನ ದಿನ ಭಾರತೀಯ ನ್ಯಾಯವ್ಯವಸ್ಥೆಗೆ ಕರಿದಿನ! ಈ ದೇಶದಲ್ಲಿ ಈಗ ನ್ಯಾಯದ ಆಸೆಯೇ ಇಲ್ಲ. ಯಾವುದೇ ಆಸೆ ಉಳಿದಿಲ್ಲ. ಮುಂಬರುವ ದಿನಗಳಲ್ಲಿ ರಕ್ತಪಿಪಾಸು ಜಿಹಾದಿಗಳಿಂದ ನೂಪುರ ಶರ್ಮಾರವರ ಕೊಲೆ ನಡೆಯಬಹುದು. ಸರ್ವೋಚ್ಚ ನ್ಯಾಯಾಲಯವು ಈ ಮೊದಲೇ ಅವರ ಮೃತದೇಹದ ವಿಲೇವಾರಿ ಮಾಡಿದೆ, ಎಂದು ಸ್ವರಾಜ್ಯ ಜಾಲತಾಣದ ಸಂಪಾದಕರು ಮತ್ತು ಪ್ರಸಿದ್ಧ ಲೇಖಕರು ಆದ ಡಾ. ಆನಂದ ರಂಗನಾಥನ್ ಇವರು ಟ್ವೀಟ್ ಮೂಲಕ ಪ್ರತಿಕ್ರಯಿಸಿದರು.

ಸರ್ವೋಚ್ಚ ನ್ಯಾಯಾಲಯವು ಉದಯಪುರ ಕೊಲೆಯ ಘಟನೆಗೆ ನೂಪುರ ಶರ್ಮಾ ಅವರನ್ನು ಹೊಣೆಯಾಗಿಸಿರುವ ಹೇಳಿಕೆ ಜುಲೈ ೧ ರಂದು ನೀಡಿತ್ತು. ಅದರ ಬಗ್ಗೆ ರಂಗನಾಥನ್ ಇವರು ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿದರು.