ನೂಪುರ ಶರ್ಮಾ ಇವರು ಕ್ಷಮೆ ಕೇಳಬಾರದು ! – ನೆದರ್‌ಲ್ಯಾಂಡ ಶಾಸಕ ಗೀರ್ತ ವಿಲ್ಡರ್ಸ್

ಆಂಸ್ಟರ್ಡ್ಯಾಮ್ (ನೆದರ್‌ಲ್ಯಾಂಡ) – ‘ಭಾರತದಲ್ಲಿ ಶರಿಯಾ ನ್ಯಾಯಾಲಯಗಳಿಲ್ಲ ಎಂದು ನನಗನಿಸುತ್ತಿತ್ತು. ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ವಿಷಯವಾಗಿ ಸತ್ಯ ಮಾತಾಡಿದ್ದಾರೆ ಅವರು ಎಂದಿಗೂ ಕ್ಷಮೆ ಕೇಳಬಾರದು. ಉದಯಪುರದ ಘಟನೆಯ ಬಗ್ಗೆ ನೂಪುರ ಶರ್ಮ ಅಲ್ಲ, ಮೂಲಭೂತವಾದಿ ಅಸಹಿಷ್ಣು ಜಿಹಾದಿ ಮುಸಲ್ಮಾನರೇ ಜವಾಬ್ದಾರರಾಗಿದ್ದಾರೆ. ನೂಪುರ ಶರ್ಮಾ ಇವರು ಹೀರೋ!’, ಎಂದು ನೆದರ್‌ಲ್ಯಾಂಡಿನ ಪಾರ್ಟಿ ಫಾರ್ ಫ್ರೀಡಂ ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಸಂಸದ ಗೀರ್ತ ವಿಲ್ಡರ್ಸ್ ಟ್ವೀಟ್ ಮಾಡಿದರು. ಈ ಟ್ವೀಟ್ ನಲ್ಲಿ #lsupportNupurSharm ಈ ಹ್ಯಾಶ್ ಟ್ಯಾಗ್ (ಯಾವುದಾದರೂ ವಿಷಯದ ಚರ್ಚೆ ನಡೆಸಲು ಉಪಯೋಗಿಸಿರುವ ಶಬ್ದಗಳು) ಉಪಯೋಗಿಸಿ ನೂಪುರ ಶರ್ಮಾ ಇವರನ್ನು ಸಮರ್ಥಿಸಿದರು.