ಹರಿದ್ವಾರದಲ್ಲಿ ಚಲಿಸುತ್ತಿರುವ ವಾಹನದಲ್ಲಿ ತಾಯಿ ಸಹಿತ ಆಕೆಯ ೬ ವರ್ಷದ ಮಗಳ ಮೇಲೆ ಸಾಮೂಹಿಕ ಬಲಾತ್ಕಾರ

ರೂಡಕಿ (ಹರಿದ್ವಾರ) – ಇಲ್ಲಿ ಚಲಿಸುತ್ತಿರುವ ವಾಹನದಲ್ಲಿ ಮಹಿಳೆ ಮತ್ತು ಆಕೆಯ ೬ ವರ್ಷದ ಮಗಳ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ‘ಮನೆಗೆ ಬಿಡುತ್ತೇನೆ’ ಎಂದು ಹೇಳಿ ಸೋನು ಎಂಬ ಆರೋಪಿ ಇಬ್ಬರನ್ನು ತನ್ನ ವಾಹನದಲ್ಲಿ ಕೂಡಿಸಿದನು. ಗಾಡಿಯಲ್ಲಿ ಆರೋಪಿಯ ಜೊತೆ ಅವನ ಸ್ನೇಹಿತರು ಕುಳಿತಿದ್ದರು. ಅವರು ಇಬ್ಬರ ಮೇಲೆ ಬಲಾತ್ಕಾರ ಮಾಡಿದರು. ನಂತರ ಆರೋಪಿ ಸಂತ್ರಸ್ತೆ ಮತ್ತು ಆಕೆಯ ಮಗಳನ್ನು ದಾರಿಯಲ್ಲಿ ಬಿಟ್ಟು ಓಡಿಹೋದರು. ಸಂತ್ರಸ್ತೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಸಂತ್ರಸ್ಥೆ ಆಕೆಯ ಮಗಳ ಜೊತೆಗೆ ರಾತ್ರಿಯ ವೇಳೆ ಪಿರಾನ ಕಾಲಿಯಾರ ಈ ಮುಸಲ್ಮಾನ ಧಾರ್ಮಿಕ ಸ್ಥಳದಿಂದ ಮನೆಗೆ ಹೋಗುತ್ತಿದ್ದಳು. ಆ ಸಮಯದಲ್ಲಿ ಈ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದೊಂದೆ ಇಂತಹ ಘಟನೆಗಳನ್ನು ತಡೆಯುವ ಉಪಾಯವಾಗಿದೆ, ಇದು ಸರಕಾರಕ್ಕೆ ಯಾವಾಗ ತಿಳಿಯುವುದು ?