ದ್ರೌಪದಿ ರಾಷ್ಟ್ರಪತಿ ಆದರೆ, ಆಗ ಪಾಂಡವರು ಯಾರು ? (ಅಂತೆ)

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇವರಿಂದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಇವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ

ತೆಲಂಗಾಣದಲ್ಲಿ ದೂರು ದಾಖಲು

ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಭಾಗ್ಯನಗರ (ತೆಲಂಗಾಣ) – ದ್ರೌಪದಿ ರಾಷ್ಟ್ರಪತಿ ಆದರೆ, ಪಾಂಡವರು ಯಾರು ? ಮತ್ತು ಎಲ್ಲಕ್ಕಿಂತ ಮಹತ್ವದ ಎಂದರೆ ಕೌರವರು ಯಾರು? ಎಂದು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇವರು ಟ್ವೀಟ್ ಮಾಡಿದ್ದಾರೆ. (ಇಂತಹವರ ಮೇಲೆ ತಕ್ಷಣ ದೂರನ್ನು ದಾಖಲಿಸಿ ಅವರಿಗೆ ಕಾರಾಗೃಹಕ್ಕೆ ಅಟ್ಟಬೇಕು ಮತ್ತು ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು. – ಸಂಪಾದಕರು) ಇದರ ವಿರೋಧದಲ್ಲಿ ತೆಲಂಗಾಣದ ಭಾಜಪ ನಾಯಕ ಗುಡೂರ ನಾರಾಯಣ ರೆಡ್ಡಿ ದೂರು ದಾಖಲಿಸಿದ್ದಾರೆ. ಅವರು ವರ್ಮಾ ಅವರ ಮೇಲೆ ಅಲ್ಟ್ರಾಸಿಟಿ ಕಾನೂನಿನ ಅಂತರ್ಗತ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ಭಾಜಪ ಗಟಬಂಧನ ಎನ್.ಡಿ.ಎ. ವತಿಯಿಂದ ದ್ರೌಪದಿ ಮುರ್ಮು ಇವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಘೋಷಿಸಲಾಗಿದೆ.

ಸಂಪಾದಕೀಯ ನಿಲುವು

* ಇದರಿಂದ ಇಂತಹ ನಿರ್ದೇಶಕರಲ್ಲಿ ಹಿಂದೂದ್ವೇಷದ ಮಾನಸಿಕತೆ ಕಂಡುಬರುತ್ತದೆ. ಅವರು ಈ ರೀತಿಯ ಅವಮಾನ ಅನ್ಯ ಮತೀಯರ ಶ್ರದ್ಧಾಸ್ಥಾನದ ಬಗ್ಗೆ ಮಾಡುತ್ತಿದ್ದರೆ ? ಇಂತಹ ಹಿಂದೂದ್ವೇಷಿ ನಿರ್ದೇಶಕರ ಚಲನಚಿತ್ರಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಹಿಂದೂ ಐಕ್ಯತೆಯ ಬಿಸಿ ಮುಟ್ಟಿಸಬೇಕು.