ಬಂಗಾಲದ ಬೀರಭೂಮ ಅಗ್ನಿದುರಂತದ ಪ್ರಕರಣ
ಹುಸೇನ್ ಇವರು ಪೊಲೀಸರಿಗೆ, “ಊರು ಉರಿಯುತ್ತಿದ್ದರೇ ಉರಿಯಲಿ, ನೀವು ಬರುವ ಅವಶ್ಯಕತೆ ಇಲ್ಲ !” ಎಂದು ಹೇಳಿದ್ದರು !
ಕೊಲಕಾತಾ (ಬಂಗಾಲ) – ರಾಜ್ಯದ ಬೀರಭೂಮ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಭಾದು ಶೇಕ್ ಇವರ ಹತ್ಯೆಯ ನಂತರ ಮಾರ್ಚ್ ೨೧ ರಂದು ರಾತ್ರಿ ಅವರ ಬೆಂಬಲಿಗರು ದಾಂಧಲೆ ಮಾಡಿ ಬೆಂಕಿ ಹಚ್ಚಿ ಮಾಡಿದ ಹಿಂಸಾಚಾರದಲ್ಲಿ ೧೦ ಜನರು ಸುಟ್ಟು ಸಾವನ್ನಪ್ಪಿದ್ದಾರೆ. ಇದರ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ವಿಭಾಗ ೯೦ ದಿನದ ನಂತರ ಆರೋಪ ಪತ್ರವನ್ನು ದಾಖಲಿಸಿದ್ದಾರೆ. ಈ ಆರೋಪ ಪತ್ರದ ಪ್ರಕಾರ ರಾಮಪುರಹಾಟದ ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷ ಆನಾರುಲ ಹುಸೇನನು ಈ ದಾಳಿಯ ಮುಖ್ಯ ಸೂತ್ರಧಾರ ಆಗಿದ್ದಾನೆ ಎಂಬುದು ಹೇಳದೆ.
Birbhum killings, in which 10 people were burnt alive including minors, CBI has found that it was ordered by TMC leader Anarul Hossain. He also supervised it and kept the police away. pic.twitter.com/OqrMCO6S9T
— Facts (@BefittingFacts) June 23, 2022
ಶೇಖ ಇವರ ಹತ್ಯೆಯ ನಂತರ ಹುಸೇನು ಅಲ್ಲಿ ನೆರೆದಿದ್ದ ಶೇಖನ ಬೆಂಬಲಿಗರಿಗೆ ಹಿಂಸೆ ಮಾಡುವುದಕ್ಕಾಗಿ ಪ್ರಚೋಧಿಸಿದ್ದನು, ಎಂದು ಆರೋಪ ಪತ್ರದಲ್ಲಿ ನಮೂದಿಸಲಾಗಿದೆ ಜೊತೆಗೆ ಹುಸೇನ ಪೊಲೀಸರಿಗೆ ಕರೆ ಮಾಡಿ, “ಊರು ಉರಿಯುತ್ತಿದೆ, ಅದು ಉರಿಯಲಿ, ನೀವು ಬರುವ ಅವಶ್ಯಕತೆ ಇಲ್ಲ.” ಎಂದು ಹೇಳಿದ್ದ. ತನಿಖಾ ವಿಭಾಗವು, ಊರಿನ ಅನೇಕ ಜನರು ಅನಾರೂಲ ಹುಸೇನ್ ಇವರನ್ನು ಸಂಪರ್ಕಿಸಿ ಪೊಲೀಸರನ್ನು ಕರೆಸಲು ವಿನಂತಿಸಿದ್ದರು; ಆದರೆ ಹುಸೇನ ಅವರು ಜನರಿಗೆ ಸಹಾಯ ಮಾಡಲಿಲ್ಲ, ತದ್ವಿರುದ್ಧ ಪೊಲೀಸರಿಗೆ ಬರದಂತೆ ಹೇಳಿದ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|