ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನು ನ್ಯಾಯಾಲಯವನ್ನು ಬಾಂಬನಿಂದ ಸ್ಫೋಟಿಸುವದಾಗಿ ಬೆದರಿಕೆ

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ. ಪತ್ರ ಬರೆದು ಬೆದರಿಕೆ ಹಾಕಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹಾಗಾಗಿ ಆತನನ್ನು ಬಂಧಿಸಲಾಯಿತು. ಆತ ರಶೀದ ಅಲಿಯ ಹೆಸರಿನಲ್ಲಿ ಪತ್ರ ಕಳುಹಿಸಿದ್ದನು. ಹಣಕಾಸಿನ ವಿಚಾರದಲ್ಲಿ ರಶಿದ ಅಲಿ ಮತ್ತು ಮಹಮ್ಮದ ವಲೀಮರ ನಡುವೆ ವಾದವಿತ್ತು. ಇದಕ್ಕಾಗಿಯೇ ವಲೀಮ ಅವನ ಹೆಸರಿನಲ್ಲಿ ಪತ್ರ ಕಳುಹಿಸಿರುತ್ತಾನೆ ಎಂದು ಹೇಳಿದರು.