ಕೇಂದ್ರ ಸಶಸ್ತ್ರ ಪಡೆ ಮತ್ತು ಆಸಾಮ ರೈಫಲ್ಸನಲ್ಲಿ ಅಗ್ನಿವೀರರಿಗಾಗಿ ೧೦ ಪ್ರತಿಶತ ಮೀಸಲಾತಿ

ಹೊಸ ದೆಹಲಿ – ಕೇಂದ್ರ ಸಶಸ್ತ್ರ ಪೊಲೀಸ ಪಡೆ ಮತ್ತು ಆಸಾಮ ರೈಫಲ್ಸ ನೇಮಕಾತಿಗಾಗಿ ಅಗ್ನಿವೀರ ಸೈನಿಕರಿಗೆ ಪ್ರತಿಶತ ೧೦ ರ ಮೀಸಲಾತಿ ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ. ಈ ಪಡೆಗಳಲ್ಲಿರುವವರ ನೇಮಕಾತಿಗೆ ವಯಸ್ಸಿನ ಮಿತಿಯಲ್ಲಿ ೩ ವರ್ಷಗಳ ವಿನಾಯತಿ ನೀಡಲಾಗಿದೆ.
ಕಾಂಗ್ರೆಸವು ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತಪಡಿಸಲಿದೆ. ಜೂನ ೧೯ ರಂದು ದೆಹಲಿಯ ಜಂತರ ಮಂತರ ಮೇಲೆ ಕಾಂಗ್ರೆಸ ಪ್ರತಿಭಟನೆ ನಡೆಸಲಿದೆ. ಮತ್ತೊಂದೆಡೆ ಜೂನ ೧೮ ರಂದು ‘ಬಿಹಾರ ಬಂದ’ ಆಂದೊಲನ ನಡೆಸಲಾಯಿತು. ವಿದ್ಯಾರ್ಥಿ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅವರನ್ನು ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ ಪಕ್ಷ ಮತ್ತು ಇತರರು ಬೆಂಬಲಿಸಿದ್ದರು.