ಉದ್ಭೋದನ ಸತ್ರ- ಹಿಂದೂ ರಾಷ್ಟ್ರ ವನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಹಿಂದೂ ಸಂಘಟನೆ
ಭಾರತದಲ್ಲಿ ಪ್ರವಾಸ ಮಾಡುವಾಗ, ನಾವು ಜಿಲ್ಲಾ ಮಟ್ಟದಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಸಹ ಆಯೋಜಿಸಿದ್ದೇವೆ. ಈ ವರ್ಷ, ಕೊರೊನಾದ ನಂತರ, ದೇಶದ ೯ ರಾಜ್ಯಗಳ ೩೬ ಜಿಲ್ಲೆಗಳಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಆಯೋಜಿಸಲಾಯಿತು. ಇದರಲ್ಲಿ ೨,೧೦೦ ಸ್ಥಳೀಯ ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು. ಎಲ್ಲಾ ರಾಜ್ಯಗಳಲ್ಲಿರುವ ಆಧ್ಯಾತ್ಮಿಕ,ಸಾಂಸ್ಕೃತಿಕ, ಶೈಕ್ಷಣಿಕ, ಸ್ಥಳೀಯ(ಸ್ವದೇಶಿ) ಮುಂತಾದ ವಿವಿಧ ಕ್ಷೇತ್ರಗಳ ಸಂಸ್ಥೆಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರವನ್ನು ತಿಳಿಸಿದ ನಂತರ, ಅವರು ಸಾಮರ್ಥ್ಯಕ್ಕನುಸಾರ ತಮ್ಮ ಸಮುದಾಯದ ಮುಂದೆ ಅಥವಾ ಅವರ ಹಿಂದೂ ಸಮುದಾಯಕ್ಕೆ ಪ್ರಸಾರ ಮಾಡುವ ಮೂಲಕ ನಮ್ಮ ಸಮ್ಮುಖದಲ್ಲಿ ಹಿಂದೂರಾಷ್ಟçದ ಸ್ಥಾಪನೆಗಾಗಿ ವ್ಯಾಖ್ಯಾನಗಳನ್ನು ಆಯೋಜಿಸಿದರು. ಹಿಂದುತ್ವದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿ ಬರುತ್ತಿದೆ. ಸಾಮಾಜಿಕ ಮಾಧ್ಯಮಗಳ ನಂತರ ರಾಷ್ಟ್ರೀಯ ಮಾಧ್ಯಮಗಳೂ ಹಿಂದುತ್ವದ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿವೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ, ಹಿಂದುತ್ವದ ಆಡಳಿತಗಾರರು ಬಹಿರಂಗವಾಗಿ ಹಿಂದುತ್ವವನ್ನು ಪ್ರಚಾರ ಮಾಡಲು ಮತ್ತು ಹಿಂದೂಗಳ ಹಿತಾಸಕ್ತಿಗಾಗಿ ಕಾನೂನುಗಳನ್ನು ಜಾರಿಗೆ ತಂದ ನಂತರ ಶೀಘ್ರದಲ್ಲೇ `ಹಿಂದೂ ರಾಷ್ಟ್ರ’ ಬರುತ್ತದೆ ಎಂದು ನಂಬಲಾಗುತ್ತಿದೆ.