ಗಿರಿಡೀಹ (ಝಾರಖಂಡ) ದಲ್ಲಿ ಹಿಂಸಾಚಾರಿ ಮುಸಲ್ಮಾನರ ಬದಲು ಹಿಂದೂಗಳ ಮೇಲೆಯೇ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಹಿಂದೂಗಳು ಪಲಾಯನ ಮಾಡುವ ಸಿದ್ಧತೆಯಲ್ಲಿದ್ದಾರೆ !

ಗಿರಿಡೀಹ (ಝಾರ್ಖಂಡ)  ಇಲ್ಲಿನ ಪಂಚಾಬಾದಲ್ಲಿನ ಹಟಿಯಾ ಮಾರ್ಗದಲ್ಲಿ ಜೂನ ೧೨ರಂದು ಚುಡಾಯಿಸಿದ ಘಟನೆಯ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ಆಕ್ರಮಣ ಮಾಡಿದ್ದರು. ಅನಂತರ ಈಗ ಇಲ್ಲಿನ ೧೫೦ಕ್ಕೂ ಹೆಚ್ಚು ಹಿಂದೂಗಳು ತಮ್ಮ ಮನೆ ಹಾಗೂ ಅಂಗಡಿಗಳನ್ನು ಮಾರುವುದಾಗಿ ಫಲಕಗಳನ್ನು ಹಚ್ಚಿದ್ದಾರೆ. ಪೊಲೀಸರು ಆಕ್ರಮಣದ ಪ್ರಕರಣದಲ್ಲಿ ಹಿಂದೂಗಳ ಮೇಲೆ ಒಮ್ಮುಖದ ಕಾರ್ಯಾಚರಣೆಯನ್ನು ಆರಂಭಿಸಿದ್ದರಿಂದ ಹಿಂದೂಗಳು ಪಲಾಯನ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.

೧. ಸ್ಥಳೀಯ ಹಿಂದೂಗಳು ಹೇಳುವಂತೆ, ಮುಸಲ್ಮಾನರು ಸತತವಾಗಿ ಹಿಂದೂಗಳ ಹುಡುಗಿಯರನ್ನು ಚುಡಾಯಿಸುತ್ತಾರೆ, ಹಿಂದೂಗಳ ಮನೆಗಳ ಮೇಲೆ ಕಲ್ಲುತೂರಾಟ ಮಾಡಲಾಗುತ್ತದೆ. ಯಾರಾದರೂ ಅವರನ್ನು ವಿರೋಧಿಸಲು ಪ್ರಯತ್ನಿಸಿದರೆ ಹಿಂದೂಗಳ ಮೇಲೆಯೇ ಅಪರಾಧವನ್ನು ದಾಖಲಿಸಲಾಗುತ್ತದೆ. ಆದುದರಿಂದ ಇಲ್ಲಿನ ಹಿಂದೂಗಳು ತೊಂದರೆಗೀಡಾಗಿದ್ದಾರೆ. ಆರೋಪಿಗಳು ಮುಕ್ತವಾಗಿದ್ದಾರೆ ಹಾಗೂ ನಿರಪರಾಧಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಇದರ ವಿರುದ್ಧ ಜೂನ ೧೫ರಂದು ಆಂದೋಲನವನ್ನೂ ಮಾಡಲಾಯಿತು. ಕಲ್ಲುತೂರಾಟ ಮಾಡಿದವರ ಮೇಲೆ ಅಪರಾಧವನ್ನು ದಾಖಲಿಸಬೇಕು.

೨. ಪೊಲೀಸರು ಹಿಂದೂಗಳ ಆರೋಪವನ್ನು ತಿರಸ್ಕರಿಸಿದ್ದಾರೆ. ಪೊಲೀಸರು ಹೇಳುವಂತೆ, ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಿ ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗಿದೆ. (ಹಾಸ್ಯಾಸ್ಪದವಾದ ಸ್ಪಷ್ಟೀಕರಣವನ್ನು ನೀಡುವ ಝಾರ್ಖಂಡದ ಪೊಲೀಸರು ! ಯಾರಾದರೂ ತಮ್ಮ ಮನೆಮಠ ಬಿಟ್ಟು ಹೋಗುವ ವಿಚಾರವನ್ನು ಏಕೆ ಮಾಡುತ್ತಾರೆ ? ಆದುದರಿಂದ ಹಿಂದೂಗಳ ಮೇಲೆ ಒಮ್ಮುಖದ ಕಾರ್ಯಾಚರಣೆಯನ್ನು ಮಾಡಿ ಅವರನ್ನು ಪಲಾಯನ ಮಾಡುವಂತೆ ಮಾಡುವ ಅನ್ಯಾಯಕಾರಿ ಪೊಲೀಸರ ಮೇಲೆ ಅವರ ವರಿಷ್ಠರು ಕಠೋರ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! ? ಸಂಪಾದಕರು) ಈ ಘಟನೆಯಲ್ಲಿನ ಇತರ ಆರೋಪಿಗಳನ್ನೂ ಬಂಧಿಸಲಾಗುವುದು.

ಸಂಪಾದಕೀಯ ನಿಲುವು

* ಝಾರ್ಖಂಡದಲ್ಲಿ ಝಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರವಿರುವುದರಿಂದ ಹಿಂದೂಗಳನ್ನೇ ಆರೋಪಿಗಳೆಂದು ನಿರ್ಧರಿಸಲಾಗುತ್ತಿದೆ. ಕೇಂದ್ರ ಸರಕಾರವು ಇಂತಹ ಘಟನೆಗಳಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !