ಬಿಹಾರದಲ್ಲಿ ನೂಪುರ ಶರ್ಮ ಬೆಂಬಲಿಸಿ ಹಿಂದೂ ಸಂಘಟನೆಗಳ ಆಂದೋಲನ !

ಸೌಜನ್ಯ ( TV 9)

ಪಾಟಲಿಪುತ್ರ (ಬಿಹಾರ) – ನೂಪುರ ಶರ್ಮ ಇವರು ಮಾಡಿದ ಮಹಮ್ಮದ್ ಪೈಗಂಬರ ಇವರ ಕಥಾಕಥಿತ ಅವಮಾನದ ಬಗ್ಗೆ ಕಳೆದ ಕೆಲವು ದಿನಗಳಿಂದ ಮುಸಲ್ಮಾನರಿಂದ ದೇಶದಲ್ಲಿ ಕೆಲವು ಕಡೆಗಳಲ್ಲಿ ಹಿಂಸಾಚಾರ ನಡೆಸಲಾಗಿದೆ. ಈಗ ಬಿಹಾರದ ಆರಾ ಹಾಗೂ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಹಿಂದೂಗಳಿಂದ ಶರ್ಮ ಇವರ ಸಮರ್ಥನಾರ್ಥ ಆಂದೋಲನ ನಡೆಸಲಾಯಿತು ಇದರಲ್ಲಿ ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಸಹ ಭಾಗಿಯಾಗಿದ್ದರು.

ಹಾಜಿಪುರದಲ್ಲಿ ಹಿಂದೂಗಳಿಂದ ಮಸೀದಿಗಳ ಎದುರು ಪ್ರದರ್ಶನ !

ಹಾಜಿಪುರದಲ್ಲಿ ಜೂನ್ ೧೪ ರಂದು `ಹಿಂದೂ ಪುತ್ರ’ ಸಂಘಟನೆಯಿಂದ ಆರತಿಯ ನಂತರ ಇಲ್ಲಿಯ ಮಸೀದಿಯ ಹೊರಗೆ ಪ್ರದರ್ಶನ ನಡೆಸಲಾಯಿತು. ಈ ಸಮಯದಲ್ಲಿ ಅವರಿಂದ `ನೂಪುರ ಶರ್ಮ ಸಂಘರ್ಷ ಮಾಡಿ, ನಾವು ನಿಮ್ಮ ಜೊತೆಗೆ ಇದ್ದೇವೆ.’ ಈ ರೀತಿಯ ಘೋಷಣೆ ಕೂಗಲಾಯಿತು, ಹಾಗೂ ಪಾಕಿಸ್ತಾನ ಸಮರ್ಥಕ ಮುರ್ದಾಬಾದ್, ಲವ್ ಜಿಹಾದ್ ಮುರ್ದಾಬಾದ್, ಇಸ್ಲಾಮಿ ಜಿಹಾದ ಮುರ್ದಾಬಾದ್ ಈ ರೀತಿಯ ಘೋಷಣೆ ನೀಡಲಾಯಿತು. ಈ ಆಂದೋಲನಕಾರರ ಮಾಹಿತಿ ತಿಳಿಯುತ್ತಲೇ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಘಟನಾ ಸ್ಥಳಕ್ಕೆ ತಲುಪಿದರು.

ಹಿಂದೂಗಳನ್ನು ರೊಚ್ಚಿಗೆಬ್ಬಿಸಿದರೆ, ಆಗ ನಿಮ್ಮನ್ನು ಯಾರು ಕಾಪಾಡಲು ಸಾಧ್ಯವಿಲ್ಲ.

ಆರಾ ದಲ್ಲಿ ರಮನಾ ಮೈದಾನದಲ್ಲಿ ನೂಪುರ ಶರ್ಮ ಇವರ ಸಮರ್ಥನಾರ್ಥ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಇವರು ಸಭೆಯನ್ನು ಆಯೋಜಿಸಿದ್ದರು. ಅದರ ನಂತರ ಒಂದು ಮೆರವಣಿಗೆಯನ್ನು ತೆಗೆಯಲಾಯಿತು. ಇದರಲ್ಲಿ ಜೈ ಶ್ರೀರಾಮ ಘೋಷಣೆಗಳನ್ನು ನೀಡಲಾಯಿತು. ಹಾಗೂ ನೂಪುರ ಶರ್ಮಾ ಇವರಿಗೆ ಏನಾದರೂ ಆದರೆ ೧೦೦ ಕೋಟಿ ಜನರನ್ನು ನೀವು ಎದುರಿಸಲು ಸಾಧ್ಯವಿಲ್ಲ ಎಂಬ ಘೋಷಣೆಯೂ ನೀಡಲಾಯಿತು. ಏನಾದರೂ ನೀವು ಹಿಂದುಗಳನ್ನು ರೊಚ್ಚಿಗೆಬ್ಬಿಸಿದರೆ ಆಗ ನಿಮ್ಮನ್ನು ಯಾರು ಕಾಪಾಡಲು ಸಾಧ್ಯವಿಲ್ಲ ಎಂದೂ ಹೇಳಲಾಯಿತು.