Video – ಬಾಲಿವುಡನಲ್ಲಿ ‘ಲವ್ ಜಿಹಾದ’ಗೆ ಪ್ರೋತ್ಸಾಹ ನೀಡುವ ಚಲನಚಿತ್ರಗಳ ನಿರ್ಮಾಣ !- ಶ್ರೀ ಪ್ರಶಾಂತ ಸಂಬರಗಿ, ಚಲನಚಿತ್ರ ವಿತರಕ, ಉದ್ಯಮಿ ಹಾಗೂ ಹಿಂದೂ ಮುಖಂಡ, ಬೆಂಗಳೂರು, ಕರ್ನಾಟಕ

ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆಯೋ, ಇವೆಲ್ಲವೂ ಬಾಲಿವುಡ್‌ನ ಮೇಲೆ ನಿರ್ಧರಿಸಲ್ಪಟ್ಟಿರುತ್ತದೆ. ಜಿಹಾದಿಗಳಿಗೆ ಹಿಂದೂಗಳ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಬೇಕಾಗಿದೆ. ಭಾರತದಲ್ಲಿರುವ ಯುವಕ-ಯುವತಿಯರ ಹಾದಿ ತಪ್ಪಿಸಲು ಬಾಲಿವುಡ್ ನಲ್ಲಿ ‘ಲವ್ ಜಿಹಾದ’ ಗೆ ಪ್ರೋತ್ಸಾಹ ನೀಡುವ ಚಲನಚಿತ್ರಗಳ ನಿರ್ಮಾಣ ಮಾಡಲಾಗುತ್ತಿದೆಯೆಂದು ಶ್ರೀ ಪ್ರಶಾಂತ ಸಂಬರಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಬಾಲಿವುಡ್ ಡ್ರಗ್ಸ ಜಿಹಾದ’ ಈ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.

(ಸೌಜನ್ಯ : Hindu Janajagruti Samiti)

ಅವರು ಮುಂದುವರಿಸುತ್ತಾ…

೧. ‘ಬಾಲಿವುಡ್’ನಲ್ಲಿ ತಯಾರಿಸಲಾಗುವ ಹೆಚ್ಚಿನ ಚಲನಚಿತ್ರಗಳಲ್ಲಿ ಮುಸಲ್ಮಾನ ಮತ್ತು ಮುಸಲ್ಮಾನರ ದೇವರನ್ನು ಸರಿಯಾಗಿ ತೋರಿಸುತ್ತಾರೆ. ಚಲನಚಿತ್ರದಲ್ಲಿ ಮುಸಲ್ಮಾನ ದೇವರನ್ನು ಶಕ್ತಿಶಾಲಿಯನ್ನಾಗಿ ತೋರಿಸಲಾಗುತ್ತದೆ. ಇದರೊಂದಿಗೆ ಚಲನಚಿತ್ರದಲ್ಲಿ ಮುಸಲ್ಮಾನರನ್ನು ಒಳ್ಳೆಯವರನ್ನಾಗಿ, ಬ್ರಾಹ್ಮಣರನ್ನು ಬಹಳ ಕೆಟ್ಟವರನ್ನಾಗಿ ತೋರಿಸಲಾಗುತ್ತದೆ.

೨. ಪಾಕಿಸ್ತಾನದ ಗಡಿಯಲ್ಲಿ ಭಾರತದಲ್ಲಿ ಅಮಲು ಪದಾರ್ಥಗಳ ಕಳ್ಳಸಾಗಾಟ ಮಾಡಲಾಗುತ್ತದೆ. ಈ ಅಮಲು ಪದಾರ್ಥಗಳ ಮಾಧ್ಯಮಗಳಿಂದ ದೇಶದ ಯುವಕರು-ಯುವತಿಯರನ್ನು ನಿಷ್ಕ್ರಿಯಗೊಳಿಸುವ ಸಂಚು ಇದಾಗಿದೆ.

೩. ನಟ ಸುಶಾಂತಸಿಂಹ ರಜಪೂತರಿಗೆ ಈ ಎಲ್ಲ ವಿಷಯಗಳು ತಿಳಿದಿದ್ದವು. ಅವರು ಇದನ್ನು ವಿರೋಧಿಸಿದ್ದರು. ಆದುದರಿಂದ ಅವರ ಹತ್ಯೆ ಮಾಡಲಾಯಿತು. ಅವರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ.

೪. ಚಲನಚಿತ್ರ ನಿರ್ಮಾಣಕ್ಕಾಗಿ ಬಾಲಿವುಡ್‌ಅನ್ನು ಅವಲಂಬಿಸದೇ ಸ್ವತಃ ಚಲನಚಿತ್ರ ತಯಾರಿಸಲು ಹಣಕಾಸು ಹೂಡಬೇಕು. ಅದರಿಂದ ಈ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗಲಿದೆ. ಈ ದೃಷ್ಟಿಕೋನದಿಂದ ಇಲ್ಲಿಯವರೆಗೆ ೬ ಚಲನಚಿತ್ರಗಳ ನಿರ್ಮಾಣ ಮಾಡಲಾಗಿದೆ.

ಹಲಾಲ ವಿರುದ್ಧ ರಸ್ತೆಗಿಳಿದು ಹೋರಾಡುವ ಆವಶ್ಯಕತೆ !- ಪ್ರಶಾಂತ ಸಂಬರಗಿ, ಉದ್ಯಮಿ

ಹಲಾಲ ಜಿಹಾದ್ ನ ವಸ್ತುಸ್ಥಿತಿ ಸಾಮಾನ್ಯ ನಾಗರಿಕರಿಗೆ ತಿಳಿಯಬೇಕೆಂದು ಬೆಂಗಳೂರಿನಲ್ಲಿ ೧೫೦ ಜನರು ರಸ್ತೆಗಿಳಿದು ಅದನ್ನು ವಿರೋಧಿಸಿದರು. ನಿರಂತರವಾಗಿ ೧೫ ದಿನ ಬೆಳಿಗ್ಗೆ ೬ ರಿಂದ ಸಾಯಂಕಾಲ ೫ ಗಂಟೆಯ ವರೆಗೆ ಪ್ರತಿಯೊಂದು ಮನೆ ಮತ್ತು ಅಂಗಡಿಗೆ ಹೋಗಿ ಈ ವಿಷಯದಲ್ಲಿ ತಿಳುವಳಿಕೆ( ಅರಿವು) ಮೂಡಿಸಲಾಯಿತು. ಪ್ರತಿದಿನ ನಾವು ೧೦ ಸಾವಿರ ಕರಪತ್ರಗಳನ್ನು ವಿತರಣೆ ಮಾಡಿದೆವು. ಇದರ ಪರಿಣಾಮ ಏನಾಯಿತೆಂದರೆ, ಕರ್ನಾಟಕ ಸರಕಾರವು ಪ್ರತಿಯೊಂದು ಕಂಪನಿಯಿಂದ ಅವರು ‘ಹಲಾಲ ಜಿಹಾದ’ ನ ಉತ್ಪಾದನೆಗಳನ್ನು ಮಾರುತ್ತಾರೆಯೇ?’ ಎನ್ನುವ ವಿಚಾರಣೆಯನ್ನು ಮಾಡಿ ಅವುಗಳ ಯಾದಿಯನ್ನು ಕೋರಿತು. ಈ ಎಲ್ಲ ಮಾಹಿತಿ ನಮ್ಮ ಕಡೆಗೆ ಇದ್ದು, ಇದರ ವಿರುದ್ಧ ನಾವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿದ್ದು ‘ಆದಷ್ಟು ಬೇಗನೆ ಇದರ ನಿರ್ಣಯ ನಮ್ಮ ಪರವಾಗಿ ಬರಲಿದೆ’, ಎಂದು ನಮ್ಮ ವಿಶ್ವಾಸವಿದೆ.