ಬಂಗಾಲದ ಇಸ್ಕಾನ್ ದೇವಸ್ಥಾನದಲ್ಲಿ ಉಷ್ಣತೆಯ ಕಾರಣದಿಂದ ಮೂವರ ದುರ್ಮರಣ

ಕೋಲಕತಾ – ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆಯ ಪಾನಿಹಾಟಿಯ ಇಸ್ಕಾನ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದಂಡ ಮಹೋತ್ಸವದಲ್ಲಿ ಉಷ್ಣತೆ ಮತ್ತು ಆರ್ದ್ರತೆಯ ಕಾರಣದಿಂದ ಜೂನ ೧೨ರಂದು ಮೂವರು ಭಕ್ತರು ಮರಣ ಹೊಂದಿದರು. ಕೊರೊನಾ ಮಹಾಮಾರಿಯಿಂದ ೨ ವರ್ಷಗಳ ಬಳಿಕ ಜರುಗಿದ ಈ ಉತ್ಸವದಲ್ಲಿ ಜನಜಂಗುಳಿ, ಗದ್ದಲದ ಕಾರಣದಿಂದ ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಳವಾಗಿತ್ತು. ಇದರಿಂದ ೫೦ ಕ್ಕಿಂತ ಅಧಿಕ ಜನರು ಅನಾರೋಗ್ಯ ಪೀಡಿತರಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರ ಮೇಲೆ ಔಷಧೋಪಚಾರ ನಡೆಯುತ್ತಿದೆ. ಸಧ್ಯ ಮಹೋತ್ಸವವನ್ನು ರದ್ದುಗೊಳಿಸಿರುವುದಾಗಿ ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ.