ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರಿಂದ ನೂಪುರ ಶರ್ಮ ಇವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ

ನೂಪುರ ಶರ್ಮ

ನವದೆಹಲಿ – ನೀವು ಪೈಗಂಬರನನ್ನು ಅವಮಾನಿಸಿ ದೊಡ್ಡ ತಪ್ಪು ಮಾಡಿದ್ದೀರಿ. ಮುಸಲ್ಮಾನ ಪ್ರತಿಯೊಂದು ಶ್ವಾಸವನ್ನು ಪೈಗಂಬರನಿಗಾಗಿಯೇ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಅವರ ಅವಮಾನಕ್ಕೆ ಶಿರಚ್ಛೇದನವೇ ಶಿಕ್ಷೆಯಾಗಿದೆ, ಎಂಬ ಬೆದರಿಕೆ ನೀಡುವ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ರಾಜಕೀಯ ಪಕ್ಷದ ಒಬ್ಬ ನಾಯಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಒಂದು ಮೆರವಣಿಗೆಯ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಮೆರವಣಿಗೆಯಲ್ಲಿ ಮುಸಲ್ಮಾನರು ಕೈಯಲ್ಲಿ ಹಿಡಿದಿರುವ ಫಲಕದ ಮೇಲೆ ಈ ರೀತಿಯ ಬರವಣಿಗೆ ಬರೆದಿರುವುದು ಕಾಣುತ್ತದೆ. ಈ ರೀತಿಯ ಇತರ ಕೆಲವು ವಿಡಿಯೋಗಳು ಸಹ ಪ್ರಸಾರ ಆಗುತ್ತಿವೆ.

ಸಂಪಾದಕೀಯ ನಿಲುವು

* ದೇಶದಲ್ಲಿ ಕಾನೂನು ಮತ್ತು ವ್ಯವಸ್ಥೆ ಇರುವಾಗ ಈ ರೀತಿಯ ಬೆದರಿಕೆ ನೀಡುವ ಧೈರ್ಯ ಹೇಗೆ ಬರುತ್ತದೆ ? ಈ ವಿಷಯವಾಗಿ ಜಾತ್ಯಾತೀತ ರಾಜಕೀಯ ಪಕ್ಷಗಳು ಮಾತನಾಡುವರೇ? ಅಥವಾ ಅವರಿಗೆ ಈ ರೀತಿಯ ಬೆದರಿಕೆ ಸಮ್ಮತ ಇರುವುದೇ?

* ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ರಾಜಕೀಯ ಪಕ್ಷವಾಗಿರುವ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ ಮೇಲೆ ನಿಷೇಧ ಹೇರುವಂತೆ ಹಿಂದೂಗಳು ಮತ್ತು ಅದರ ಸಂಘಟನೆಗಳು ಬೇಡಿಕೆ ಸಲ್ಲಿಸಬೇಕು !