ಸಾಮಾನ್ಯ ಜ್ಞಾನವಿಲ್ಲದ ಮತ್ತು ರಾಷ್ಟ್ರವಿರೋಧಿ !

ಯಾವ ದೇಶವು ಭಾರತದ ಮೇಲೆ ನೂರೈವತ್ತು ವರ್ಷ ರಾಜ್ಯವನ್ನಾಳಿ, ಅದನ್ನು ದುರ್ದಶೆಗೆ ತಳ್ಳಿ, ಅದನ್ನು ಗುಲಾಮನನ್ನಾಗಿಸಿತೋ; ಅತ್ಯಂತ ಸಮೃದ್ಧವಾಗಿರುವ ಈ ದೇಶದ ಎಲ್ಲ ಕ್ಷೇತ್ರಗಳಲ್ಲಿನ ಮೂಲ ವ್ಯವಸ್ಥೆಯನ್ನು ಧ್ವಂಸ ಮಾಡಿ ಅದನ್ನು ಅಧಃಪತನದ ಕೂಪಕ್ಕೆ ತಳ್ಳಿತೋ; ಯಾರು ಭಾರತದ ಗುರುಕುಲ ಪದ್ಧತಿಯನ್ನು ನಾಶ ಮಾಡಿ, ಅದರ ಧರ್ಮಶಿಕ್ಷಣದ ಬೆನ್ನೆಲಬನ್ನು ಮುರಿದು ಪಾಶ್ಚಾತ್ಯ ಕುಸಂಸ್ಕೃತಿಯ ಕೋಲನ್ನು ಕೈಗೆ ನೀಡಿತೋ; ಹಡಗು, ಬಟ್ಟೆಗಳು, ಕೃಷಿ ಮುಂತಾದ ಎಲ್ಲ ಉದ್ಯೋಗಗಳನ್ನು ಆಯೋಜನಾಬದ್ಧವಾಗಿ ನಾಶಗೊಳಿಸಿ ಅದನ್ನು ಬಡತನಕ್ಕೊಳಪಡಿಸಿ ಅದರ ನ್ಯಾಯವ್ಯವಸ್ಥೆಯನ್ನು ದಬ್ಬಿ ತನ್ನ ಕ್ರೂರ ಕಾನೂನುಗಳನ್ನು ಹೇರಿತೋ, ಆ ಮತ್ತು ಆ ಬ್ರಿಟಿಷರೊಂದಿಗೆ ಈ ದೇಶದ ಮೊದಲ ಪ್ರಧಾನಮಂತ್ರಿಗಳ ಗಾಢ ಸ್ನೇಹವಿತ್ತು. ಅವರ ಮರಿಮಗನೇ ಈಗ ಅದೇ ದೇಶಕ್ಕೆ ಹೋಗಿ ಭಾರತವಿರೋಧಿ ವಿಷಕಾರುತ್ತಿದ್ದಾನೆ. ಇದು ಕಾಕತಾಳಿಯವಲ್ಲ. ಇಲ್ಲಿನ ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಮೋದಿ ಮತ್ತು ಹಿಂದೂದ್ವೇಷಕ್ಕಾಗಿ ರಾಹುಲ ಗಾಂಧಿಯವರು ಈ ದೇಶದ ಘನತೆಯನ್ನೇ ಪಣಕ್ಕೊಡ್ಡಿ ದೇಶವಿರೋಧೀ ವಿಷಕಾರಿದರು. ಇದು ಅತ್ಯಂತ ಖಂಡನೀಯವಾಗಿದ್ದು ಪ್ರತಿಯೊಬ್ಬ ಭಾರತೀಯ ಇದನ್ನು ಖಂಡಿಸಬೇಕು. ಬ್ರಿಟನ್ ಸದ್ಯಕ್ಕೆ ಭಾರತದ ಬಹಿರಂಗ ಶತ್ರುವಲ್ಲದಿದ್ದರೂ, ಭಾರತದ ಸಾವಿರಾರು ಕ್ರಾಂತಿಕಾರರನ್ನು ಗಲ್ಲಿಗೇರಿಸಿದ ಮತ್ತು ಭಾರತವನ್ನು ಅಪಾರವಾಗಿ ಶೋಷಣೆ ಮಾಡಿದ ‘ನ ಭೂತೋ ನ ಭವಿಷ್ಯತಿ ಹೀಗೆ ಎಲ್ಲ ರೀತಿಯಿಂದ ಹಾನಿಯನ್ನುಂಟು ಮಾಡಿದ ದೇಶವಾಗಿದೆ, ಎಂಬುದನ್ನು ನಾವು ಎಂದಿಗೂ ಮರೆಯುವಂತಿಲ್ಲ.

ರಾಷ್ಟ್ರಾಭಿಮಾನಶೂನ್ಯ ರಾಹುಲ ಗಾಂಧಿ !

ರಷ್ಯಾ-ಉಕ್ರೇನ್ ಯುದ್ಧಕಾಲದಲ್ಲಿ ಭಾರತವು ತೆಗೆದುಕೊಂಡ ನಿಲುವಿನ ಬಗ್ಗೆ ಭಾರತವಷ್ಟೇ ಅಲ್ಲ, ಅನೇಕ ವಿದೇಶಿ ತಜ್ಞರೂ ಕೊಂಡಾಡಿದರು. ಎರಡೂ ದೇಶಗಳಿಗೆ ನೋವುಂಟು ಮಾಡದೇ ಯಾರ ಬಗ್ಗೆಯೂ ನೇರ ಪಕ್ಷ ವಹಿಸದೇ; ಆದರೆ ಸಿಲುಕಿದ ಭಾರತೀಯ ನಾಗರಿಕರನ್ನು ಹೊರತರುವಲ್ಲಿ ಮೋದಿ ಸರಕಾರವು ಯಶಸ್ವಿಯಾಗಿದೆ, ಇದು ಪ್ರಧಾನಮಂತ್ರಿ ಮೋದಿ ಸರಕಾರದ ವಿದೇಶನೀತಿಯ ಯಶಸ್ಸಾಗಿತ್ತು. ಹೀಗಿರುವಾಗ ಆ ಬಗ್ಗೆ ಬ್ರಿಟನ್‌ನ ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನೀಡಿದ ಸಂದರ್ಶನದಲ್ಲಿ ನಕಾರಾತ್ಮಕ ಹೇಳಿಕೆಯನ್ನು ನೀಡಿ ರಾಹುಲ ಗಾಂಧಿಯವರು ಸ್ವತಃ ನಗೆಪಾಟಲೀಗೀಡಾಗಿದ್ದಾರೆ. ಭಾರತೀಯ ಆರ್ಥಿಕತೆಯ ಬಗ್ಗೆ ಮಾತನಾಡುವ ಮತ್ತು ಅದೂ ವಿದೇಶಕ್ಕೆ ಹೋಗಿ ಆ ಬಗ್ಗೆ ಹೇಳಿಕೆ ನೀಡುವಷ್ಟು ರಾಹುಲ ಗಾಂಧಿಯವರಿಗೆ ಅರ್ಹತೆಯಾದರೂ ಇದೆಯೇ ? ಮುಖ್ಯವೆಂದರೆ ಅವರು ವಿದೇಶಕ್ಕೆ ಹೋಗಿ ದೇಶದ ಮಹತ್ವಪೂರ್ಣ ವಿಷಯಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವ ಅಧಿಕಾರವನ್ನು ರಾಹುಲ ಗಾಂಧಿಯವರಿಗೆ ಯಾರು ನೀಡಿದರು ?

ಅದೂ ಅವರು ಯಾವುದೇ ಅಂಶದಿಂದ ದೇಶದ ಅಧಿಕೃತ ಪ್ರತಿನಿಧಿತ್ವ ಮಾಡದಿರುವಾಗಲೂ ! ವಿದೇಶಕ್ಕೆ ಹೋಗಿ ‘ಭಾರತದ ಸ್ಥಿತಿ ಚೆನ್ನಾಗಿಲ್ಲ, ಬೆಲೆಯೆರಿಕೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಉತ್ಪಾದನೆಯನ್ನು ಹೆಚ್ಚಿಸಿ ನೌಕರಿ ಕೊಡಬೇಕು, ಎಂಬಂತಹ ಹೇಳಿಕೆಗಳನ್ನು ನೀಡಿ ರಾಹುಲ ಗಾಂಧಿಯವರು ಏನು ಸಾಧಿಸುತ್ತಿದ್ದಾರೆ ? ಇಷ್ಟೇ ಅಲ್ಲದೇ, ಭಾರತೀಯ ಆರ್ಥಿಕತೆಯ ಬಗ್ಗೆ ಮಾತನಾಡುವಾಗ ಅವರು ಭಿಕ್ಷಾಟನೆ ಮಾಡುವಷ್ಟರ ಮಟ್ಟಿಗೆ ಹೋದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳೊಂದಿಗೆ ಭಾರತವನ್ನು ಹೋಲಿಸಿ ಭಾರತವನ್ನು ಅವಮಾನಿಸಿ ಸ್ವತಃ ನಗೆಪಾಟಲಿಗೀಡಾಗಿದ್ದಾರೆ. ‘ಮುಂಬರುವ ಕಾಲದಲ್ಲಿ ಭಾರತದ ವಿಕಾಸದರ ಶೇ. ೬.೫ ರ ಆಸುಪಾಸು ಇರಲಿದೆ, ಎಂದು ತಜ್ಞರ ಅಂದಾಜಿದೆ. ಹೀಗಿರುವಾಗ ರಾಹುಲ ಗಾಂಧಿಯವರು ಮೇಲಿನ ಹೇಳಿಕೆಯನ್ನು ಯಾವ ಆಧಾರದಲ್ಲಿ ನೀಡಿದರು ?

‘ದೇಶದ ‘ಆತ್ಮಾ (ನಿಜವಾದ ಸ್ವರೂಪ) ಈಗ ಜಾಗೃತವಾಗುತ್ತಿದೆ, ಎಂದು ಹಿಂದೂಗಳಿಗೆ ಅನಿಸುತ್ತಿದೆ. ಹೀಗಿರುವಾಗ ‘ದೇಶದ ಆತ್ಮಾ ಮೃತಪಟ್ಟಿದೆ, ಎಂದು ಗಾಂಧಿಯವರು ಸಂದರ್ಶನದಲ್ಲಿ ನುಡಿಮುತ್ತು ಉದುರಿಸಿದರು. ಜಾತ್ಯತೀತ ಕಾಂಗ್ರೆಸ್ಸಿನ ಈ ಯುವಾ ಮುಖಂಡನಿಗೆ (?) ‘ಆತ್ಮಾ ಮುಂತಾದ ಶಬ್ದಗಳನ್ನು ಬಳಸಲು ಅಧಿಕಾರವೆಲ್ಲಿದೆ ? ಒಂದು ವೇಳೆ ಅದು ಹಾಗಿದ್ದರೆ, ಆತ್ಮಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿನ ಪ್ರತಿಯೊಂದು ವಿಷಯವು ಅವರಿಗೆ ಒಪ್ಪಿಗೆಯಾಗಬೇಕು. ಯಾವ ಮನೆತನದ ಹೊಕ್ಕುಳಬಳ್ಳಿ ಎಂದಿಗೂ ಈ ಮಣ್ಣಿನೊಂದಿಗೆ ಒಂದಾಗಲಿಲ್ಲವೋ, ಅದು ಇಲ್ಲಿನ ಮಣ್ಣಿನಲ್ಲಿನ ಸುಸಂಸ್ಕೃತಿಯ ಸುಗಂಧವನ್ನು ಎಂದಿಗೂ ಅನುಭವಿಸಲು ಸಾಧ್ಯವಾಗಲಿಲ್ಲವೋ, ಯಾರ ಸಂಸ್ಕಾರ ಎಂದಿಗೂ ಇಲ್ಲಿನ ಸಂಸ್ಕಾರಗಳೊಂದಿಗೆ ಒಂದಾಗಲಿಲ್ಲವೋ, ಅವರು ಸುಮ್ಮನೆ ದೊಡ್ಡ ದೊಡ್ಡ ಪದಗಳನ್ನು ಬಳಸಿ ಮತ್ತು ವೈಚಾರಿಕತೆಯ ನೆಪ ಹೇಳಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆಯನ್ನು ನೀಡುವುದು, ಇದನ್ನು ಭಾರತೀಯರು ಏಕೆ ಸಹಿಸಬೇಕು ? ಸಂತರು ಮತ್ತು ದಾರ್ಶನಿಕರಿಗೆ ಮುಂಬರುವ ಕಾಲದಲ್ಲಿ ಭಾರತದ ಉಜ್ವಲ ಭವಿಷ್ಯವು ಕಾಣಿಸುತ್ತಿರುವಾಗ ರಾಹುಲ ಗಾಂಧಿಯವರಿಗೆ ‘ಭಾರತವು ಮೃತಪಟ್ಟಂತೆ ಅನಿಸುತ್ತದೆ ಹಾಗಿದ್ದರೆ ಅವರು ಇಟಲಿಗೆ ತಮ್ಮ ತವರುಮನೆಗೆ ಶಾಶ್ವತವಾಗಿ ನಿಶ್ಚಿಂತರಾಗಿ ಹೋಗಬಹುದು. ಕೆಲವು ದಿನಗಳ ಹಿಂದೆ ‘ಭಾರತ ಒಂದು ರಾಷ್ಟ್ರವಲ್ಲ, ಎಂದು ಅವರು ವಿಷಕಾರಿದ್ದರು. ಬ್ರಿಟಿಶರ ಆಗಮನದ ಮೊದಲು ಹಿಂದೂಕುಶ ಪರ್ವತದ ಇತ್ತೀಚಿನ ಭೂಮಿಯಲ್ಲಿ ಹಲವು ರಾಜ್ಯಗಳಿದ್ದರೂ, ಅವುಗಳ ಸಂಸ್ಕೃತಿ ಒಳಗಿನಿಂದ ಏಕರೂಪವಾಗಿತ್ತು. ಅವುಗಳ ಬಗ್ಗೆ ಈಗ ವಿಷಯ ಮಂಡಿಸುವುದು ಯೋಗ್ಯವಲ್ಲ. ಅಮೇರಿಕದಂತೆ ನಮಗೆ ಪ್ರತಿಯೊಂದು ರಾಜ್ಯದ ನಾಗರಿಕತ್ವವನ್ನು ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ. ಸ್ವಾತಂತ್ರ್ಯದ ನಂತರ ಎಲ್ಲ ರಾಜ್ಯಗಳು ಒಂದೇ ದೇಶದ ಭಾಗಗಳಾಗಿವೆ. ಆದುದರಿಂದ ‘ಆಂಗ್ಲರಾಗಿರುವ ರಾಹುಲ ಗಾಂಧಿಯವರ ಈ ರೀತಿಯ ಅಜ್ಞಾನದಿಂದ ಅವರು ಯಾವುದೋ ಅಂತರರಾಷ್ಟ್ರೀಯ ಪಿತೂರಿಯ ಮತ್ತು ವಿದೇಶಿ ಶಕ್ತಿಗಳ ಅಡಿಯಾಳಾಗಿರುವುದರಿಂದ ಹೀಗೆ ವ್ಯಕ್ತವಾಗಿದೆಯೇ ?, ಎಂಬ ಸಂದೇಹ ಮೂಡುತ್ತದೆ.

ಇತ್ತಿಚೆಗೆ ನಡೆದ ಕಾಂಗ್ರೆಸ್ ಶಿಬಿರದಲ್ಲಿ ‘ಭಾರತವನ್ನು ಪುನಃ ಹೇಗೆ ಪ್ರಾಪ್ತಮಾಡಿಕೊಳ್ಳಬೇಕು ? ಎಂಬ ಬಗ್ಗೆ ಚಿಂತನವಾಯಿತು. ಅಂದರೆ, ಭಾಜಪ ಭಾರತವನ್ನು ಕಬಳಿಸಿದೆ ಎಂದು ಅವರಿಗೆ ಹೇಳುವುದಿದೆ. ರಾಹುಲ ಗಾಂಧಿಯವರು, ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಜನರು ಕಾಂಗ್ರೆಸ್ಸಿನ ದುರ್ದಶೆಯಾದುದರಿಂದ ಭಾಜಪವನ್ನು ಬಹುಮತದಿಂದ ೨ ಬಾರಿ ಆರಿಸಿ ತಂದಿದ್ದಾರೆ, ಎಂಬುದನ್ನು ಅವರು ಮರೆತಿದ್ದಾರೆ. ಆದುದರಿಂದ ಹೀಗೆ ಹೇಳುವುದು ಆ ಪ್ರಜಾಪ್ರಭುತ್ವದ ಎಲ್ಲ ಜನರ ಅಪಮಾನವೇ ಆಗಿದೆ. ಯಾವ ಪಕ್ಷದ ಅರ್ಧದಷ್ಟು ಜನರಿಗೆ ಅವರು ನಾಯಕರೆಂದು ಇಷ್ಟಪಡುವುದಿಲ್ಲವೋ, ಯಾರಿಗೆ ತಮ್ಮದೇ ವೈಚಾರಿಕ ಗೊಂದಲವಿದೆಯೋ, ಅವರು ಅಂತಾರಾಷ್ಟ್ರೀಯ ಕೀರ್ತಿಪಡೆದ ಭಾರತದ ಪ್ರಧಾನಿಯವರನ್ನು ಎಷ್ಟೇ ಹೀಗಳೆಯಲು ಪ್ರಯತ್ನಿಸಿದರೂ ಅದರಿಂದೇನು ಲಾಭವಿಲ್ಲ, ಎಂಬುದು ಅವರಿಗೆ ತಿಳಿಯುತ್ತಿಲ್ಲ.

‘ಭಾಜಪ ದೇಶದಾದ್ಯಂತ ‘ಕೆರೊಸಿನ್ ಹರಡಿದೆ ಮತ್ತು ಎಂದಿಗೂ ಕಿಡಿ ಬೀಳಬಹುದು, ಎಂಬ ಮಾತನ್ನು ರಾಹುಲ ಗಾಂಧಿಯವರು ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಹೇಳಿದರು. ಅವರು ಟೀಕಿಸುವ ರೀತಿಯಲ್ಲಿ ಹೇಳಿದರೂ, ಭಾಜಪ ಅಲ್ಲ; ಆದರೆ ಹಿಂದುತ್ವನಿಷ್ಠ ಸಂಘಟನೆಗಳು ಹಿಂದುತ್ವದ ಅಲೆಗಳನ್ನು ದೇಶದ ಎಲ್ಲ ಕಡೆಗಳಲ್ಲಿ ಹಬ್ಬಿಸಿವೆ, ಎಂಬುದು ಮಾತ್ರ ಸತ್ಯವಿದೆ ಮತ್ತು ಅದರ ಬಿರುಗಾಳಿಗಳು ಅಷ್ಟೆ ದೊಡ್ಡದಾಗಿರುವ ಚಿಹ್ನೆ ಸದ್ಯದ ಸ್ಥಿತಿಯಿಂದ ಕಾಣ ಸಿಗುತ್ತಿದೆ. ಈ ಬಿರುಗಾಳಿಗಳಲ್ಲಿ ದೇಶದ ದುಷ್ಟ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವು ಬೀಜಗಳ ರೂಪದಲ್ಲಿ ಅಡಗಿದೆ, ಎಂಬುದು ರಾಹುಲ ಗಾಂಧಿಯವರಂತಹ ಹಿಂದೂ ವಿರೋಧಕ ಅರಿತಿರುವುದರಿಂದ ಈ ಅವಸ್ಥೆ ಈಗ ಪ್ರಕಟವಾಗತೊಡಗಿದೆ. ರಾಮ ಮಂದಿರ, ಕಾಶಿ-ಮಥುರಾ ಅನಂತರ ತಾಜಮಹಲ್, ಕುತುಬಮಿನಾರ್ ಮತ್ತು ನಿಧಾನವಾಗಿ ಇಂತಹ ಎಲ್ಲ ಮುಚ್ಚಲ್ಪಟ್ಟ ದೇವಸ್ಥಾನಗಳ ಸತ್ಯವು ಬೆಳಕಿಗೆ ಬರುವ ಕಾಲವು ಹತ್ತಿರ ಬರುತ್ತಿದೆ. ಆದುದರಿಂದ ಹಿಂದುವಿರೋಧಕರಿಗಾದ ಅಸ್ವಸ್ಥತೆಯ ಅರಿವಾಗುತ್ತದೆ; ಆದರೆ ದೇಶದ ಹೊರಗೆ ಹೋಗಿ ಅದನ್ನು ಪ್ರಕಟಿಸುವುದನ್ನು ಎಂದಿಗೂ ಸ್ವೀಕರಿಸುವುದಿಲ್ಲ !