ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ರಾಷ್ಟ್ರದ ಧ್ವಜವಾಗಲಿದೆ !- ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪ

ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪ( ಎಡದಲ್ಲಿ )

ಬೆಂಗಳೂರು- ಸಾವಿರಾರು ವರ್ಷಗಳಿಂದ ಕೇಸರಿ ಧ್ವಜವನ್ನು ಗೌರವಿಸಲಾಗುತ್ತಿದೆ. ಕೇಸರಿ ಧ್ವಜ ತ್ಯಾಗದ ಪ್ರತೀಕವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ಭಾರತದ ರಾಷ್ಟ್ರ ಧ್ವಜವಾಗಲಿದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ತ್ಯಾಗದ ಭಾವನೆಯನ್ನು ಕಾಪಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇಸರಿ ಧ್ವಜವನ್ನು ಮುಂದಿಟ್ಟು ಪೂಜಿಸುತ್ತದೆ. ಸಂವಿಧಾನಕ್ಕನುಗುಣವಾಗಿ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ತ್ರಿವರ್ಣಕ್ಕೆ ಯಾವ ಗೌರವವನ್ನು ನೀಡಬೇಕೋ, ಅದನ್ನು ನಾವು ನೀಡುತ್ತೇವೆ ಎಂದು ರಾಜ್ಯದ ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪನವರು ಹೇಳಿಕೆ ನೀಡಿದ್ದರು. ಅನೇಕ ರಾಜಕೀಯ ಮುಖಂಡರು ಈ ಹೇಳಿಕೆಗೆ ನಿಷೇಧ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಕೆ.ಎಸ್. ಈಶ್ವರಪ್ಪನವರು ಫೆಬ್ರುವರಿ ೨೦೨೨ ರಲ್ಲಿಯೂ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ತ್ರಿವರ್ಣದ ಸ್ಥಾನವನ್ನು ಅಲಂಕರಿಸಲಿದೆ; ಆದರೆ ಅದು ಇಷ್ಟು ಶೀಘ್ರವಾಗಿ ಸಾಧ್ಯವಾಗಲಾರದು. ಅದಕ್ಕೆ ಬಹಳ ಸಮಯ ತಗಲಬಹುದು; ಆದರೆ ಮುಂಬರುವ ಕಾಲದಲ್ಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಲಿದೆನೆಂದು ಹೇಳಿದ್ದರು. ಅವರ ಹೇಳಿಕೆಯು ರಾಜಕೀಯ ವಲಯಗಳಲ್ಲಿ ಕೋಲಾಹಲವೆಬ್ಬಿಸಿತ್ತು.