ಹರಿದ್ವಾರ (ಉತ್ತರಾಖಂಡ) – ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಅವರ ಆಸ್ತಿಯಿಂದ ಹೊರಗಿಡಲು ಇಲ್ಲಿನ ನ್ಯಾಯಾಲಯವೊಂದು ತೀರ್ಪು ನೀಡಿದೆ. ೬ ವೃದ್ಧ ದಂಪತಿಗಳ ಮೇಲೆ ದೌರ್ಜನ್ಯ ಎಸಗಿದ ಮಕ್ಕಳ ವಿರುದ್ಧ ಹಾಗೂ ಅವರಿಗೆ ನೀಡಿರುವ ಆಸ್ತಿಯನ್ನು ಮರಳಿ ಪಡೆಯುವಂತೆ ಅರ್ಜಿ ಸಲ್ಲಿಸಿದ್ದರು. ಆ ಕುರಿತು ನ್ಯಾಯಾಲಯವು ಈ ತೀರ್ಪು ನೀಡಿದೆ. ನ್ಯಾಯಾಲಯವು ಮಕ್ಕಳಿಗೆ ಮುಂದಿನ ತಿಂಗಳೊಳಗೆ ಆಸ್ತಿಯನ್ನು ಹಿಂದಿರುಗಿಸುವಂತೆಯೂ ಆದೇಶಿಸಿದೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದರೆ, ಆಸ್ತಿಯನ್ನು ವಶಪಡಿಸಿಕೊಂಡು ವೃದ್ಧರಿಗೆ ಹಿಂದಿರುಗಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
‘No right to parents’ property for children who torture them’ https://t.co/ytEE4zM8Qg
— TOI Cities (@TOICitiesNews) May 26, 2022
ಸಂಪಾದಕೀಯ ನಿಲುವುಮಕ್ಳಳ ಮೇಲೆ ಯೋಗ್ಯ ಸಂಸ್ಕಾರ ನೀಡದೇ ಇದ್ದರಿಂದ ಇಂತಹ ಮಕ್ಕಳು ಮುಂದೆ ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಾರೆ. ಹಿಂದೂ ರಾಷ್ಟ್ರದಲ್ಲಿ ಎಲ್ಲರಿಗೂ ಸಾಧನೆ ಕಲಿಸಿ ಧರ್ಮಾಚರಣೆ ಮಾಡುವುದನ್ನು ಕಲಿಸಿದನಂತರ ಅವರು ತಮ್ಮ ಹೆತ್ತವರನ್ನು ಮಗುವಿನಂತೆ ನೋಡಿಕೊಳ್ಳುವರು ! |