ಲಕ್ಷ್ಮಣಪುರಿ (ಉತ್ತರ ಪ್ರದೇಶ) : ರಾಜ್ಯದಲ್ಲಿ ಮೊದಲ ಬಾರಿಗೆ ಈದ್ ಮತ್ತು ‘ಅಲ್ವಿದಾ ಜುಮಾ’ (ರಂಜಾನನ ಕೊನೆಯ ದಿನ) ದಂದು ರಸ್ತೆಗಳಲ್ಲಿ ನಮಾಜ್ ಆಗಲಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಹಿತಿ ನೀಡಿದರು.
ಯೋಗಿ ಆದಿತ್ಯನಾಥ ತಮ್ಮ ಮಾತನ್ನು ಮುಂದುವರೆಸುತ್ತಾ, “ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈದ್ ದಿನದಂದು ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಲ್ಲಿಸಲಾಗಿದೆ. ವಿಶೇಷವೆಂದರೆ ಈ ವರ್ಷ ಶ್ರೀರಾಮನವಮಿ ದಿನವೂ ರಾಜ್ಯದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಈ ಹಿಂದೆ ಮುಜಾಫ್ಫರನಗರ, ಮೆರಠ, ಮುರಾದಾಬಾದ ಮತ್ತು ಇತರ ಸ್ಥಳಗಳಲ್ಲಿ ಗಲಭೆಗಳು ಆಗುತ್ತಿದ್ದವು. ಅಲ್ಲಿ ಎಷ್ಟೋ ತಿಂಗಳುಗಳಿಂದ ಸಂಚಾರ ನಿರ್ಬಂಧ ಇತ್ತು; ಆದರೆ ೨೦೧೭ರಿಂದ ಸಂಪೂರ್ಣ ಉತ್ತರಪ್ರದೇಶದಲ್ಲಿ ಗಲಭೆಯ ಒಂದೂ ಘಟನೆ ನಡೆದಿಲ್ಲ ಎಂದು ಹೇಳಿದರು.
#CMYogi ने कहा- #UttarPradesh में यह पहली बार हुआ है जब ईद और अलविदा जुमे की नमाज सड़क पर नहीं पढ़ी गईhttps://t.co/vm89ooVnNd
— Times Now Navbharat (@TNNavbharat) May 23, 2022
ನಮ್ಮ ಸರಕಾರವು ರಾಜ್ಯದಲ್ಲಿ ಅಕ್ರಮ ಖಸಾಯಿಖಾನೆಗಳನ್ನು ಮುಚ್ಚಿಸಿದೆ. ಗೋವುಗಳನ್ನು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿಡಲು ನಾವು ಗೋಶಾಲೆಗಳನ್ನು ನಿರ್ಮಿಸಿದ್ದೇವೆ. ನಾವು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕಿಸಿದ್ದೇವೆ. ಇದಲ್ಲದೆ ನಮ್ಮ ಸರಕಾರವು ಸುಮಾರು ೭೦೦ ಧಾರ್ಮಿಕ ಸ್ಥಳಗಳನ್ನು ಪುನರನಿರ್ಮಾಣ ಕೈಗೊಂಡಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾಜಪ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ಹೆಮ್ಮೆಯಿಂದ ಹೇಳಿಕೊಳ್ಳುವ ಇಂತಹ ಸಮಯವನ್ನು ತರಬೇಕು ! |