‘ಯಾತ್ರಿಗಳು ಕಾಶ್ಮೀರದ ಸಮಸ್ಯೆಯಲ್ಲಿ ಸಹಭಾಗಿಯಾಗದಿರುವ ತನಕ ಯಾತ್ರೆಯು ಸುರಕ್ಷಿತ !’ (ಅಂತೆ)

ಅಮರನಾಥ ಯಾತ್ರೆಯ ಮೊದಲೇ ಜಿಹಾದಿ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆಯ ಪತ್ರ


ಶ್ರೀನಗರ (ಜಮ್ಮೂ-ಕಾಶ್ಮೀರ) – ಬರುವ ಜೂನ್ ೩೦ರಿಂದ ಅಮರನಾಥ ಯಾತ್ರೆಯು ಆರಂಭವಾಗಲಿದ್ದು ಅಗಸ್ಟ ೧೧ರಂದು ಅದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ‘ದ ರೆಜಿಸ್ಟನ್ಸ್ ಫ್ರಂಟ್’ ಜಿಹಾದಿ ಭಯೋತ್ಪಾದಕ ಸಂಘಟನೆಯು ಬೆದರಿಕೆಯ ಪತ್ರವನ್ನು ಪ್ರಸಾರಿತಗೊಳಿಸಿದೆ. ಇದರಲ್ಲಿ ‘ನಾವು ಯಾತ್ರೆಯನ್ನು ವಿರೋಧಿಸುವುದಿಲ್ಲ; ಆದರೆ ಎಲ್ಲಿಯ ವರೆಗೆ ಯಾತ್ರಿಗಳು ಕಾಶ್ಮೀರದ ಸಮಸ್ಯೆಯಲ್ಲಿ ಸಹಭಾಗಿಯಾಗುವುದಿಲ್ಲವೋ ಅಲ್ಲಿಯ ವರೆಗೆ ಅವರು ಸುರಕ್ಷಿತರಾಗಿದ್ದಾರೆ. ಅವರು (ಸರಕಾರ) ಅಮರನಾಥ ಯಾತ್ರೆಯನ್ನು ತಮ್ಮ ಕೊಳಕು ರಾಜಕಾರಣಕ್ಕಾಗಿ ಮಾಡಲಿದ್ದಾರೆ. ಕೇವಲ ೧೫ ಸಾವಿರದಿಂದ ೮ ಲಕ್ಷ ಯಾತ್ರಿಕರ ನೋಂದಣಿ ಹಾಗೂ ೧೫ ರಿಂದ ೮೦ ದಿನಗಳ ವರೆಗಿನ ಸಮಯವು ಕೇವಲ ಕಾಶ್ಮೀರದ ಪರಿಸ್ಥಿತಿಯ ಸಂವೇದನಾಶೀಲತೆಯನ್ನು ಉದ್ರೇಕಿಸಲಿಕ್ಕಾಗಿ ಇದೆ. ಈ ಫಾಸಿಸ್ಟ (ಹುಕುಮಶಾಹಿ) ಆಡಳಿತವನ್ನು ಅಮರನಾಥ ಯಾತ್ರೆಯ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಣಿವೆಗೆ ತರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಬರೆಯಲಾಗಿದೆ.

೪೩ ದಿನಗಳ ವರೆಗೆ ನಡೆಯುವ ಅಮರನಾಥ ಯಾತ್ರೆಯಲ್ಲಿನ ಯಾತ್ರಿಗಳ ಸಂಖ್ಯೆಯು ಮೊದಲಿಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ರಾಮಬನ ಮತ್ತು ಚಂದನವಾಸಿಯಲ್ಲಿ ದೊಡ್ಡ ಛಾವಣಿ ಇರಬಹುದು. ಈ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತಿನ ಸುರಕ್ಷಾವ್ಯವಸ್ಥೆಯನ್ನು ಇಡಲಾಗುವುದು.

ಸಂಪಾದಕೀಯ ನಿಲುವು

ಕಾಶ್ಮೀರದ ಸಂದರ್ಭದಲ್ಲಿ ಯಾತ್ರಿಗಳು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ನಿರ್ಧರಿಸಲು ಭಯೋತ್ಪಾದಕರು ಯಾರು ? ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಪ್ರತಿಯೊಬ್ಬ ಹಿಂದೂವಿಗೆ ಈ ಬಗ್ಗೆ ಮಾತನಾಡುವ ಅಧಿಕಾರವಿದೆ !