ನಾವು ೩ ದೇವಸ್ಥಾನಗಳನ್ನು ಕೇಳಿದ್ದೆವು; ಆದರೆ ನೀವು ಕೊಡಲಿಲ್ಲ, ಈಗ ಎಲ್ಲಾ ದೇವಸ್ಥಾನಗಳನ್ನು ತೆಗೆದುಕೊಳ್ಳುತ್ತೇವೆ!

ಬಿಜೆಪಿ ಶಾಸಕ ಅಭಿಜಿತ ಸಿಂಗ ಸಾಂಗಾ ಇವರ ಘೊಷಣೆ!

ಬಿಜೆಪಿ ಶಾಸಕ ಅಭಿಜಿತಸಿಂಗ ಸಾಂಗಾ(ಎಡದಲ್ಲಿ )

ಕಾನ್ಪುರ (ಉತ್ತರಪ್ರದೇಶ)– ಇಲ್ಲಿಯ ಬಿಜೆಪಿ ಶಾಸಕ ಅಭಿಜಿತಸಿಂಗ ಸಾಂಗಾ ಅವರು ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಹೆಳುತ್ತಾರೆ, `ದುರ್ಯೋಧನ ೫ ಗ್ರಾಮಗಳನ್ನು ನೀಡಲಿಲ್ಲ, ಆಗ ಅವನು ಸಂಪೂರ್ಣ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ನಾವು ೩ (ಅಯೋಧ್ಯೆ, ಕಾಶಿ, ಮಥುರಾ) ದೇವಸ್ಥಾನಗಳನ್ನು ಕೇಳಿದ್ದೆವು. ನೀವು (ಮುಸಲ್ಮಾನರು) ಕೊಡಲಿಲ್ಲ. ಈಗ ನೀವು ಸಿದ್ಧರಾಗಿರಿ, ನಾವು ಎಲ್ಲಾ ದೇವಾಲಯಗಳನ್ನು ವಾಪಾಸು ಪಡೆದುಕೊಳ್ಳುತ್ತೇವೆ! `ದೇಶದಾದ್ಯಂತ ಸಾವಿರಾರು ದೇವಾಲಯಗಳನ್ನು ಕೆಡವಿ ಅಲ್ಲಿ ಮುಸಲ್ಮಾನ ಆಕ್ರಮಣಕಾರರಿಂದ ಮಸೀದಿ ಮತ್ತು ದರ್ಗಾಗಳನ್ನು ಕಟ್ಟಲಾದ ಇತಿಹಾಸ ಇದೆ. ಆ ಹಿನ್ನೆಲೆಯಲ್ಲಿ ಸಾಂಗಾ ಅವರು ಈ ಟ್ವೀಟ್ ಮಾಡಿದ್ದಾರೆ.