ಭಯೋತ್ಪಾದಕರ ಜೊತೆ ನಂಟಿರುವ ಆರೋಪದ ಮೇಲೆ ಕಾಶ್ಮೀರ ವಿಶ್ವವಿದ್ಯಾಲಯದ ೨೫ ಪ್ರಾಧ್ಯಾಪಕರು ಅಮಾನತ್ತು

ಶ್ರೀನಗರ (ಜಮ್ಮು ಕಾಶ್ಮೀರ) : ಜಮ್ಮು ಕಾಶ್ಮೀರ ಸರಕಾರ ಕಾಶ್ಮೀರ ವಿಶ್ವವಿದ್ಯಾಲಯದ ಸುಮಾರು ೧೫ ಪ್ರಾಧ್ಯಾಪಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಭಯೋತ್ಪಾದಕರ ಜೊತೆ ನಂಟಿರುವ ಕಾರಣದಿಂದ ಅಮಾನತ್ತುಗೊಳಿಸುವ ನಿರ್ಣಯ ತೆಗೆದುಕೊಂಡಿದೆ. ಇದಲ್ಲದೆ ೨೪ ಜನರಿಗೆ ತಿಳುವಳಿಕೆ ನೀಡಲಾಗುವುದು. ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹಮ್ಮದ್ ಹುಸೇನ್ ಪಂಡಿತ್ ಇವರು ಈ ಮೊದಲೇ ಅಮಾನತರಾಗಿದ್ದರು. ಹುಸೇನ್ ಇವರು ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾಹ ಗಿಲಾನಿ ಇವರ ಹತ್ತಿರದ ವ್ಯಕ್ತಿಯಾಗಿದ್ದಾರೆ. ಹಾಗೂ ವಿಶ್ವವಿದ್ಯಾಲಯದಲ್ಲಿ ಕಟ್ಟರ ಪ್ರತ್ಯೇಕತಾವಾದಿ ಕಾರ್ಯಕರ್ತರ ಜೊತೆ ಇವರ ಸಂಬಂಧ ಇದೆಯೆಂದು ಹೇಳಲಾಗುತ್ತಿದೆ. ಭಯೋತ್ಪಾದಕರ ಮತ್ತು ಪ್ರತ್ಯೇಕತಾವಾದಿಗಳ ಸಂಪರ್ಕ ವ್ಯವಸ್ಥೆ ಸಿದ್ಧಪಡಿಸುವ ಕೆಲಸ ‘ಕಾಶ್ಮೀರಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ’ ಮಾಡುತ್ತಿದೆ.

ಯಾವ ಪ್ರಾಧ್ಯಾಪಕರ ಮೇಲೆ ಕ್ರಮಕೈಗೊಳ್ಳಲಾಗುವುದೋ ಅವರ ಮೇಲೆ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳ ನಡುವೆ ವೈಚಾರಿಕ ವ್ಯವಸ್ಥೆ ನಿರ್ಮಿಸಲು ಪ್ರಯತ್ನಿಸುವ ಆರೋಪ ಇದೆ.

ಸಂಪಾದಕೀಯ ನಿಲುವು

ಎಲ್ಲಿ ಪ್ರಾಧ್ಯಾಪಕರೇ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಾರೆಯೋ ಅಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಾಠ ಕಲಿಸಲಾಗುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !