ಮದರ್ ತೆರೇಸಾ ಕ್ಯಾಥೋಲಿಕ್ ಚರ್ಚಿನ ಕುಕರ್ಮಗಳನ್ನು ತೆರೆಯ ಮರೆಗೆ ಸೇರಿಸುವ ಕೆಲಸ ಮಾಡಿದರು ! – ಸಾಕ್ಷ್ಯ ಚಿತ್ರದಲ್ಲಿ ಆರೋಪ

ನವ ದೆಹಲಿ : ಶಾಂತಿಗಾಗಿ ನೊಬೆಲ್ ಪುರಸ್ಕಾರ ಮತ್ತು ಭಾರತರತ್ನ ಪಡೆದಿರುವ ಮದರ್ ತೆರೇಸಾ ಇವರ ಮೇಲೆ ಒಂದು ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ. ಮದರ್ ತೆರೇಸಾ ಫಾರ್ ದಿ ಲವ ಆಫ್ ಗಾಡ್ ಹೆಸರಿನ ಈ ಸಾಕ್ಷ್ಯ ಚಿತ್ರದಲ್ಲಿ ಕೆಥೋಲಿಕ್ ಚರ್ಚಿನ ಕುಕರ್ಮಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಇದರಲ್ಲಿ, ಮದರ್ ತೆರೇಸಾ ಯುದ್ಧ ತಡೆಯುವಲ್ಲಿ ಸಕ್ಷಮರಾಗಿದ್ದರು. ಅನೇಕ ದೇಶಗಳ ರಾಷ್ಟ್ರಪತಿಗಳ ಜೊತೆಗೆ ಅವರಿಗೆ ಸ್ನೇಹ ಸಂಬಂಧ ಇತ್ತು. ಅವರು ಜಾಗತಿಕ ಮಟ್ಟದಲ್ಲಿ ಅನಾಥಾಲಯಗಳ ಒಂದು ಬಲೆಯನ್ನು ನಿರ್ಮಿಸಿದ್ದರು. ಅವರ ಕೋರಿಕೆಯ ಮೇಲೆ ಕಾರಾಗೃಹದಲ್ಲಿದ್ದ ಅನೇಕ ರೋಗಿಗಳನ್ನು ಮುಕ್ತಗೊಳಿಸಲಾಗಿತ್ತು. ಆದರೆ ಹೀಗಿರುವಾಗಲೂ ಅವರು ಕ್ಯಾಥೋಲಿಕ್ ಚರ್ಚಿನಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ತೆರೆಯ ಮರೆಗೆ ಸೇರಿಸುವ ಕೆಲಸ ಮಾಡಿದರು. ಈ ಸಾಕ್ಷ್ಯ ಚಿತ್ರದಲ್ಲಿ ಮದರ ತೆರೆಸಾ ಅವರ ಹತ್ತಿರದ ಸ್ನೇಹಿತರೊಂದಿಗೆ ಮತ್ತು ಕೆಲವು ವಿರೋಧಕರ ಜೊತೆಗೆ ಚರ್ಚಿಸಲಾಗಿತ್ತು.

ಸೌಜನ್ಯ : Sky TV

ಒಳ್ಳೆಯ ಆಸ್ಪತ್ರೆ ನಡೆಸಲು ಸಾಕಾಗುವಷ್ಟು ಹಣ ಇರುವಾಗ ಮದರ್ ತೆರೇಸಾ ಅವರು ಅದನ್ನು ಏಕೆ ಮಾಡಲಿಲ್ಲ ? ಬ್ರಿಟಿಷ್ ಡಾ. ಜಾಕ್ ಪ್ರೇಗರ್

ಮದರ್ ತೆರೇಸಾ ಅವರು ಬ್ರಿಟಿಷ್ ಡಾಕ್ಟರ ಜಾಕ್ ಪ್ರೇಗರ್ ಇವರ ಸಹಾಯದಿಂದ ಸಮಾಜಿಕ ಕಾರ್ಯವನ್ನು ಪ್ರಾರಂಭ ಮಾಡಿದರು. ಸಾಕ್ಷ್ಯ ಚಿತ್ರದಲ್ಲಿ ಅವರು ಈ ವಿಷಯದಲ್ಲಿ ಹೇಳಿದ್ದು ಏನೆಂದರೆ, ತೆರೆಸಾ ಇವರ ಆಸ್ಪತ್ರೆಯಲ್ಲಿ ದಾದಿಯರು (ನರ್ಸ್) ಯೋಗ್ಯ ರೀತಿಯಲ್ಲಿ ರೋಗಿಗಳ ಕಾಳಜಿ ವಹಿಸುತ್ತಿರಲಿಲ್ಲ. ಮುಂದೆ ಸಿರಿಂಜ್ ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ತೆರೇಸಾ ಅವರ ಹತ್ತಿರ ಬಡವರಿಗಾಗಿ ಒಳ್ಳೆಯ ಆಸ್ಪತ್ರೆ ನಡೆಸುವಷ್ಟು ಹಣ ಇತ್ತು, ಆದರೆ ಅವರು ಎಂದಿಗೂ ಈ ರೀತಿ ಮಾಡಲಿಲ್ಲ. ಅವರು ಹೇಳುವರು, ಯಾವುದೇ ಉಪಚಾರವಿಲ್ಲದೆ ನಾವೆಲ್ಲರೂ ಅವರಿಗಾಗುವ ತೊಂದರೆ ದೂರ ಮಾಡುವುದಕ್ಕಾಗಿ ಪ್ರಾರ್ಥನೆ ಮಾಡೋಣ. ದಾದಿಯರಿಗೆ ಅವರು ಚಾಬೂಕಿನಿಂದ ತನ್ನನ್ನೇ ದಂಡಿಸಿಕೊಳ್ಳಬೇಕು ಮತ್ತು ಮುಳ್ಳುಗಳ ಸರಪಳಿಯನ್ನು ಕತ್ತಿನಲ್ಲಿ ಹಾಕಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಮದರ್ ತೆರೇಸಾ ಇವರ ಮೇಲೆ ಈ ರೀತಿಯ ಅನೇಕ ಗಂಭೀರ ಆರೋಪ ಮಾಡಲಾಗಿದೆ. ಆದ್ದರಿಂದ ಇದರ ಶೋಧ ನಡೆಸಿ ಸತ್ಯ ಜಗತ್ತಿನ ಮುಂದೆ ತರುವುದಕ್ಕಾಗಿ ಕೇಂದ್ರ ಸರಕಾರ ಒಂದು ಸಮಿತಿಯ ಸ್ಥಾಪನೆ ಮಾಡಬೇಕು.