ಜಮ್ಮೂ-ಕಾಶ್ಮೀರದಲ್ಲಿನ ವಿಧಾನಸಭಾ ಮತದಾರ ಕ್ಷೇತ್ರದ ಪುನರ‍್ರಚನೆ

  • ಜಮ್ಮೂವಿನಲ್ಲಿ ೬, ಕಾಶ್ಮೀರದಲ್ಲಿ ೧ ಮತದಾರ ಕ್ಷೇತ್ರವು ಹೆಚ್ಚಾಗಿದೆ !

  • ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗಾಗಿ ೨ ಜಾಗಗಳನ್ನು ಮೀಸಲಿಡಲಾಗಿದೆ

ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ-ಕಾಶ್ಮೀರದಲ್ಲಿನ ವಿಧಾನಸಭಾ ಮತದಾರ ಕ್ಷೇತ್ರದ ಪುನರ‍್ರಚನೆಗಾಗಿ ನೇಮಿಸಲಾದ ವ್ಯಾಪ್ತಿ ನಿರ್ಧರಿಸುವ ಆಯೋಗವು ತನ್ನ ವರದಿಯನ್ನು ಸಾದರಪಡಿಸಿದೆ. ಇದರ ಅನುಸಾರ ರಾಜ್ಯದಲ್ಲಿನ ವಿಧಾನಸಭೆಯ ಒಟ್ಟೂ ೭ ಜಾಗಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ನೀಡಲಾಗಿದೆ. ಜಮ್ಮೂ-ಕಾಶ್ಮೀರದಲ್ಲಿ ವಿಧಾನಸಭೆಯ ಜಾಗಗಳ ಸಂಖ್ಯೆಯು ೮೩ ರಿಂದ ೯೦ರ ವರೆಗೆ ಏರಿಕೆಯಾಗಲಿದೆ. ಹೆಚ್ಚಾದ ೭ ರ ಪೈಕಿ ೬ ಜಾಗಗಳು ಜಮ್ಮೂವಿನಲ್ಲಿದ್ದರೆ ೧ ಕಾಶ್ಮೀರದಲ್ಲಿದೆ. ಹಾಗೆಯೇ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗಾಗಿ ವಿಧಾನಸಭೆಯಲ್ಲಿ ೨ ಜಾಗಗಳನ್ನು ಮೀಸಲಿಡುವ ಪ್ರಸ್ತಾಪವನ್ನೂ ನೀಡಲಾಗಿದೆ. ಪಾಕವ್ಯಾಪ್ತ ಕಾಶ್ಮೀರಕ್ಕಾಗಿ ೨೪ ಜಾಗಗಳನ್ನು ಖಾಲಿ ಇಡಲಾಗಿದೆ. ಈ ಹಿಂದೆಯೂ ಈ ಜಾಗಗಳನ್ನು ಖಾಲಿ ಇಡಲಾಗಿತ್ತು. ಈಗ ಈ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು. ಅದರ ನಂತರ ರಾಜಪತ್ರ ಅಧಿಸೂಚನೆಯ ಮೂಲಕ ಇದರ ಕಾರ್ಯಾಚರಣೆಯನ್ನು ನಡೆಸಲಾಗುವುದು. ಈ ವರದಿಯಿಂದಾಗಿ ಈಗ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯನ್ನು ನಡೆಸುವ ಮಾರ್ಗವು ಮುಕ್ತವಾಗಿದೆ.

ಸದ್ಯ ಜಮ್ಮೂವಿನ ಭಾಗದಲ್ಲಿ ವಿಧಾನಸಭೆಯ ೬೭ ಕ್ಷೇತ್ರಗಳಿದ್ದರೆ, ಕಾಶ್ಮೀರದಲ್ಲಿ ೪೬ ಕ್ಷೇತ್ರಗಳಿವೆ. ಈ ವರದಿಯ ಕಾರ್ಯಾಚರಣೆಯ ನಂತರ ಜಮ್ಮೂವಿನಲ್ಲಿ ವಿಧಾನಸಭೆಯ ಕ್ಷೇತ್ರಗಳ ಸಂಖ್ಯೆಯು ೪೩ ಆಗಲಿದ್ದರೆ, ಕಾಶ್ಮೀರ ವಿಭಾಗದ ಕ್ಷೇತ್ರಗಳ ಸಂಖ್ಯೆಯು ೪೭ ಆಗಲಿದೆ. ಮೊದಲಿಗೆ ಅನುಸೂಚಿತ ಪಂಗಡಕ್ಕಾಗಿ ೯ ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಇವುಗಳ ಪೈಕಿ ೬ ಜಮ್ಮೂ ವಿಭಾಗದಲ್ಲಿದ್ದರೆ ೩ ಕಾಶ್ಮೀರ ವಿಭಾಗದಲ್ಲಿವೆ.

ಪಾಕಿಸ್ತಾನವು ಭಾರತೀಯ ರಾಜದೂತರ ಬಳಿ ಆಕ್ಷೇಪವನ್ನು ನೋಂದಾಯಿಸಿದೆ !

ಇಸ್ಲಾಮಾಬಾದ (ಪಾಕಿಸ್ತಾನ) – ಜಮ್ಮೂ ಕಾಶ್ಮೀರದ ವಿಧಾನಸಭಾ ಮತದಾರ ಕ್ಷೇತ್ರದ ಪುನರ‍್ರಚನೆಯಾದ ನಂತರ ಪಾಕಿಸ್ತಾನವು ಭಾರತದ ರಾಜದೂತರನ್ನು ಕರೆದು ಅವರ ಬಳಿ ಆಕ್ಷೇಪವನ್ನು ನೋಂದಾಯಿಸಿದೆ. ಪಾಕಿಸ್ತಾನವು ‘ನಾವು ಪುನರ‍್ರಚನೆಯ ವರದಿಯನ್ನು ತಿರಸ್ಕರಿಸುತ್ತೇವೆ. ಈ ಪುನರ‍್ರಚನೆಯ ಉದ್ದೇಶವು ಮುಸಲ್ಮಾನರನ್ನು ನಾಗರೀಕತೆಯ ಅಧಿಕಾರದಿಂದ ವಂಚಿಸಲು ಹಾಗೂ ಅವರನ್ನು ದುರ್ಬಲರನ್ನಾಗಿಸಲು ಇದೆ’ ಎಂದು ಹೇಳಿದೆ.

ಪಾಕಿಸ್ತಾನದ ವಿದೇಶಿ ಮಂತ್ರಾಲಯದಿಂದ ‘ಈ ಪುನರ‍್ರಚನೆಯ ಹಿಂದೆ ಭಾರತದಲ್ಲಿನ ಗುಪ್ತ ಯೋಜನೆಗಳು ಅಡಗಿವೆ. ಈ ಮೂಲಕ ಮುಸಲ್ಮಾನರ ವರ್ಚಸ್ಸನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದೆ. (ಪಾಕಿಸ್ತಾನವು ವಿಭಜನೆಯ ನಂತರ ಹಿಂದೂಗಳನ್ನು ಏನು ಮಾಡಿದರು ಮತ್ತು ಸದ್ಯವೂ ಹಿಂದೂಗಳ ವಿಷಯದಲ್ಲಿ ಏನು ನಡೆಯುತ್ತಿದೆ, ಎಂಬುದನ್ನು ಹೇಳಬೇಕು ! ಪಾಕಿಸ್ತಾನವು ಭಾರತಕ್ಕೆ ಮುಸಲ್ಮಾನರ ಸಂದರ್ಭದಲ್ಲಿ ಕೇಳುವುದಕ್ಕಿಂತಲೂ ಚೀನಾದಲ್ಲಿ ಮುಸಲ್ಮಾನರ ಸ್ಥಿತಿ ಹೇಗಿದೆ, ಎಂಬುದರ ಬಗ್ಗೆ ಮಾತನಾಡುವ ಧೈರ್ಯವನ್ನು ತೋರಿಸಬೇಕಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತವು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ ಪಾಕಿಸ್ತಾನವು ಭಾರತದ ನಿರ್ಣಯಗಳ ಸಂದರ್ಭದಲ್ಲಿ ಮೂಗು ತೂರಿಸಬಾರದು, ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ !