ಕರ್ನಾಟಕದಲ್ಲಿ ಮುಸಲ್ಮಾನರ ವಾಟ್ಸೆಪ್‌ ಗುಂಪುಗಳಿಂದ ಮುಸಲ್ಮಾನ ಹುಡುಗಿಯರಿಗೇ ಬೆದರಿಕೆ !

ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ತೆಗೆದರೆ ಥಳಿಸಲಾಗುವುದು !

ಮಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿ ಮುಸಲ್ಮಾನರ ಅಧಿಕಾರಗಳ ರಕ್ಷಣೆ ಮಾಡುವುದಾಗಿ ಹೇಳಿಕೊಳ್ಳುವ ‘ಡಿಫೆನ್ಸ್‌ ಫೋರ್ಸ’ ಎಂಬ ವಾಟ್ಸಾಪ್‌ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ಧರಿಸದಿರುವ ಮುಸಲ್ಮಾನ ಹುಡುಗಿಯರಿಗೆ ಬೆದರಿಕೆ ಹಾಕಿದೆ. ‘ಮುಸಲ್ಮಾನ ಹುಡುಗಿಯರು ಬುರಖಾ ಧರಿಸದೇ ಸಾರ್ವಜನಿಕ ಸ್ಥಳಗಳಿಗೆ ಹೋದರೆ ಅವರನ್ನು ಥಳಿಸಲಾಗುವುದು’ ಎಂಬ ಬೆದರಿಕೆಯನ್ನು ಮುಸಲ್ಮಾನ ಹುಡುಗಿಯರಿಗೆ ನೀಡಲಾಗಿದೆ. ಈ ಬೆದರಿಕೆಯನ್ನು ಮಂಗಳೂರು ಪೊಲೀಸರು ಪರಿಗಣಿಸಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಮುಸಲ್ಮಾನ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ತೆಗೆಯಬಾರದು, ಹಾಗೆಯೇ ‘ಸೆಲ್ಫಿ’ (ಮೊಬೈಲಿನಲ್ಲಿ ತಮ್ಮ ಛಾಯಾಚಿತ್ರವನ್ನು ತೆಗೆಯುವುದು) ತೆಗೆದುಕೊಳ್ಳಬಾರದು, ಎಂದೂ ಈ ಬೆದರಿಕೆಯಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ‍್ಯದ ಬಗ್ಗೆ ಕಿರುಚಾಡುವ ಪುರೋಗಾಮಿಗಳ ಗುಂಪು ಈಗ ಯಾವ ಬಿಲದಲ್ಲಿ ಹೋಗಿ ಅಡಗಿ ಕುಳಿತಿದೆ ?