ಕೇರಳದ ಮಾಜಿ ಸಂಸದ ಪಿ.ಸಿ. ಜಾರ್ಜ್ ಇವರಿಗೆ ಜಾಮೀನಿನ ಮೇಲೆ ಬಿಡುಗಡೆ

ಮುಸಲ್ಮಾನರ ಜೊತೆಗೆ ವ್ಯಾಪಾರ ಬಹಿಷ್ಕರಿಸುವ ಕರೆ ನೀಡಿದ ಪ್ರಕರಣ

ತಿರುವನಂತಪುರಂ (ಕೇರಳ) – ಕೇರಳದ ಮುಸಲ್ಮಾನರ ಉಪಹಾರ ಗೃಹಗಳಲ್ಲಿ ಸಿಗುವ ಚಹಾದಂತಹ ಪಾನಿಯಗಳಲ್ಲಿ ಮಾದಕ ಪದಾರ್ಥ ಇರುತ್ತದೆ. ಇದರಿಂದ ಹಿಂದೂಗಳನ್ನು ನಪುಂಸಕ ಮತ್ತು ಮಹಿಳೆಯರಿಗೆ ಬಂಜೆವಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಇದರ ಮೂಲಕ ಮುಸಲ್ಮಾನರು ದೇಶದ ಮೇಲೆ ಅಧಿಕಾರ ಪಡೆಯುವುದಾಗಿದೆ. ಇದರಿಂದ ಮುಸಲ್ಮಾನರ ಜೊತೆಗಿನ ವ್ಯಾಪಾರ ಬಹಿಷ್ಕರಿಸಿ, ಎಂದು ಕೇರಳದ ಕಾಂಗ್ರೆಸ್ಸಿನ ಮಾಜಿ ನಾಯಕ ಮತ್ತು ಮಾಜಿ ಸಂಸದ ಪಿ.ಸಿ. ಚಾರ್ಜ್ ಇವರು ಹಿಂದೂಗಳ ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದ್ದರು. ಇದಕ್ಕೆ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ನಾಯಕ ಪಿ.ಕೆ. ಫಿರೋಜ್ ಇವರು ನೀಡಿರುವ ದೂರಿನ ನಂತರ ಜಾರ್ಜ್ ಇವರ ವಿರುದ್ಧ ಆರೋಪ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ಅವರಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಹಿಂದೂರಾಷ್ಟ್ರ ವಶಕ್ಕೆ ಪಡೆಯುವುದರ ಧ್ಯೇಯದ ಕಡೆಗೆ ಮುಸಲ್ಮಾನರ ಮುನ್ನಡೆ : ಪಿ.ಸಿ. ಜಾರ್ಜ್

ಜಾರ್ಜ್ ತಮ್ಮ ಮಾತು ಮುಂದುವರೆಸುತ್ತಾ, ‘ಮುಸಲ್ಮಾನ್ ಇತರ ಸಮಾಜದಿಂದ ಹಣ ಪಡೆಯುವುದಕ್ಕಾಗಿ ಮುಸಲ್ಮಾನರೆತರ ಭಾಗದಲ್ಲಿ ವ್ಯವಸಾಯ ಆರಂಭಿಸುತ್ತಿದ್ದಾರೆ. ಇಂತಹ ವ್ಯಾಪಾರದ ಮೇಲೆ ಬಹಿಷ್ಕಾರ ಹಾಕಬೇಕು. ಹಿಂದೂ ಮತ್ತು ಕ್ರೈಸ್ತ ಮಹಿಳೆಯರು ಹೆಚ್ಚು ಮಕ್ಕಳಿಗೆ ಜನ್ಮನೀಡಲು ಬಯಸುವುದಿಲ್ಲ; ಆದರೆ ಮುಸಲ್ಮಾನ ಮಹಿಳೆಯರು ಈ ಕೆಲಸ ಅತ್ಯಂತ ಗಾಂಭೀರ್ಯತೆಯಿಂದ ಮಾಡುತ್ತಾರೆ. ಹಿಂದೂರಾಷ್ಟ್ರ ವಶಕ್ಕೆ ಪಡೆಯುವ ಧ್ಯೇಯದ ಕಡೆಗೆ ಮುನ್ನಡೆಯುತ್ತಿದ್ದಾರೆ. ಹಿಂದೂ ಮತ್ತು ಕ್ರೈಸ್ತ ಮಹಿಳೆಯರು ಕನಿಷ್ಠ ೪ ಮಕ್ಕಳಿಗೆ ಜನ್ಮ ನೀಡುವುದು ಅವಶ್ಯಕವಾಗಿದೆ.’ ಎಂದು ಹೇಳಿದರು.