ರಾಜಸ್ಥಾನ್‌ನ ಕಾಂಗ್ರೆಸ್ ಮುಖ್ಯಮಂತ್ರಿಗಳ ಇಫ್ತಾರ ಪಾರ್ಟಿಯಲ್ಲಿ ಹಿಂದುವಿರೋಧಿ ಗಲಭೆಯ ಮತಾಂಧ ಆರೋಪಿ ಉಪಸ್ಥಿತ !

ಜಯಪುರ (ರಾಜಸ್ಥಾನ) – ಇಲ್ಲಿನ ಕಾಂಗ್ರೆಸ ಸರಕಾರದ ಮುಖ್ಯಮಂತ್ರಿ ಅಶೋಕ ಗಹಲೊತರವರ ಮನೆಯಲ್ಲಿ ಎಪ್ರಿಲ್ ೨೩ರಂದು ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಯಿತು. ಅದರಲ್ಲಿ ರಾಜ್ಯದಲ್ಲಿನ ಹನ್ನೆರಡು ಜಿಲ್ಲೆಗಳ ಪೈಕಿ ಛಬಡಾದಲ್ಲಿ ಎಪ್ರಿಲ್ ೧೧, ೨೦೨೧ ರಂದು ಮತಾಂಧರು ನಡೆಸಿದ ಗಲಭೆಯ ಮುಖ್ಯ ಆರೋಪಿ ಆಸಿಫ ಅನ್ಸಾರಿ ಕೂಡ ಭಾಗವಹಿಸಿದ್ದನು. ಆ ಸಮಯದಲ್ಲಿ ಅವನು ಕಾಂಗ್ರೆಸ ಮುಖಂಡ ಹಾಗೂ ಸಚಿವರೊಂದಿಗೆ ಛಾಯಾಚಿತ್ರವನ್ನು ತೆಗೆಸಿಕೊಂಡಿದ್ದನು.

೧. ಈ ವಿಷಯದಲ್ಲಿ ಛಬಡಾ ವಿಧಾನಸಭೆಯ ಮತದಾರ ಸಂಘದ ಭಾಜಪದ ಶಾಸಕ ಪ್ರತಾಪಸಿಂಹ ಸಿಂಘವೀಯವರು, ಗಲಭೆಯ ಆರೋಪಿಯು ಮುಖ್ಯಮಂತ್ರಿಗಳ ಇಫ್ತಾರ ಪಾರ್ಟಿಯಲ್ಲಿ ಉಪಸ್ಥಿತನಾಗಿರುವುದು, ಚಿಂತೆಯ ವಿಷಯವಾಗಿದೆ. ಮುಖ್ಯಮಂತ್ರಿಗಳ ನಿವಾಸಸ್ಥಾನದೊಳಗೆ ಹೇಗೆ ಪ್ರವೇಶಿಸಲು ನೀಡಿದರು, ಎಂಬ ಬಗ್ಗೆ ವಿಚಾರಣೆ ನಡೆಯಬೇಕು’ ಎಂದು ಹೇಳಿದರು.

೨. ಈ ವಿಷಯದ ಬಗ್ಗೆ ಪೊಲೀಸ ಅಧೀಕ್ಷಕ ಮೀಣಾರವರು, ನಮಗೆ ಇಫ್ತಾರಗಾಗಿ ಬರುವವರ ಪಟ್ಟಿಯನ್ನು ನೀಡಿರಲಿಲ್ಲ. ಆಸಿಫ ಇವನು ಛಬಡಾ ಗಲಭೆಯ ಆರೋಪಿಯಾಗಿದ್ದರೂ ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಅವನನ್ನು ಯಾರು ಆಮಂತ್ರಿಸಿದ್ದರು ಎಂಬ ಬಗ್ಗೆ ನಮಗೆ ತಿಳಿದಿಲ್ಲ ಎಂದರು.

ಸಂಪಾದಕೀಯ ನಿಲುವು

ಕಾಂಗ್ರೆಸ ಇಲ್ಲಿಯವರೆಗೂ ಜಿಹಾದಿ ಭಯೋತ್ಪಾದಕ ಹಾಗೂ ಮತಾಂಧರನ್ನು ತಲೆಯ ಮೇಲೆ ಕೂರಿಸಿಕೊಂಡು ಹಿಂದೂಗಳನ್ನು ಕಾಲ್ತುಳಿತಕ್ಕೆ ಪ್ರಯತ್ನಿಸಿದೆ, ಈ ಘಟನೆಯಿಂದ ಮತ್ತೊಮ್ಮೆ ಕಂಡು ಬಂದಿದೆ. ಇಂತಹ ಕಾಂಗ್ರೆಸ ಅನ್ನು ದೇಶದಿಂದ ರಾಜಕೀಯ ದೃಷ್ಟಿಯಿಂದ ಕೊನೆಗೊಳಿಸುವುದೇ ಯೋಗ್ಯ !