ಹಿಂದೂಗಳ ವಿರೋಧದ ನಂತರ ಮಲಬಾರ್ ಗೋಲ್ಡ್ ನಿಂದ ನಾಯಕಿ ತಮನ್ನಾ ಭಾಟಿಯಾ ಇವರು ಬಿಂದಿ ಇಟ್ಟಿರುವ ಜಾಹೀರಾತು ಪ್ರಸಾರಿತ !

ಮುಂಬಯಿ – ಎಂಪಿ ಅಹಮದ್ ಇವರ ಮಾಲಿಕತ್ವದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಜ್ರಾಭರಣ ಮಾರಾಟ ಮಾಡುವ ಸಮೂಹ ಅಕ್ಷಯ ತೃತೀಯಾದ ಪ್ರಯುಕ್ತ ಆಭರಣಗಳ ಜಾಹೀರಾತು ಪ್ರಸಾರ ಮಾಡುವಾಗ ನಾಯಕಿ ಕರೀನಾ ಕಪೂರ್ ಖಾನ ಇವರನ್ನು ತೋರಿಸಲಾಗಿತ್ತು. ಆದರೆ ಅವರ ಹಣೆಯ ಮೇಲೆ ಬೊಟ್ಟು ಇರಲಿಲ್ಲ. ಇದನ್ನು ಹಿಂದೂಗಳು ವಿರೋಧಿಸಿದ ನಂತರ ಈಗ ಕರೀನಾ ಕಪೂರ್ ಖಾನ ಇವರ ಬದಲು ನಾಯಕಿ ತಮನ್ನಾ ಭಾಟಿಯಾ ಇವರ ಬೊಟ್ಟಿರುವ ಮತ್ತು ಆಭರಣ ತೊಟ್ಟಿರುವ ಜಾಹೀರಾತು ಪ್ರಸಾರ ಮಾಡಲಾಗಿದೆ. ಆದರೆ ಹಿಂದೂಗಳಿಂದ ವಿರೋಧದ ನಂತರ ಈ ಸಮೂಹದಿಂದ ಯಾವುದೇ ರೀತಿಯ ಕ್ಷಮಾಯಾಚನೆ ಮಾಡಲಾಗಿಲ್ಲ ಅಥವಾ ಅಧಿಕೃತವಾಗಿ ಈ ವಿಷಯದಲ್ಲಿ ಯಾವುದೇ ಸ್ಪಷ್ಟೀಕರಣ ನೀಡಲಾಗಿಲ್ಲ.

ಇದು ವಿರೋಧದ ಪರಿಣಾಮವಾಗಿ ಬದಲಾವಣೆಯಾಗಿರುವುದರಿಂದ ಸಮೂಹದ ಹಿಂದೂ ವಿರೋಧಿ ನಿಲುವಿಗೆ ಹಿಂದೂಗಳಿಂದ ವಿರೋಧ ಹಾಗೆ ಮುಂದುವರೆಯುವುದು ಎಂದು ಹೇಳಲಾಗುತ್ತಿದೆ.


ಇದನ್ನು ಗಮನಿಸಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ : ಚರ್ಚಾ ಹಿಂದೂರಾಷ್ಟ್ರ ಕೀ ದಲ್ಲಿ , ಹಿಂದೂ ಹಬ್ಬಗಳಲ್ಲಿ ಹಿಂದೂ ವಿರೋಧಿ ಪ್ರಚಾರ ? ಈ ವಿಷಯದ ಬಗ್ಗೆ ಆನ್ಲೈನ್ ವಿಶೇಷ ಸಂವಾದ !

ಸಂಪಾದಕರ ಭೂಮಿಕೆ

ಈ ರೀತಿ ತಾತ್ಕಾಲಿಕ ಬದಲಾವಣೆ ಮಾಡಿದ ನಂತರ ಹಿಂದೂಗಳ ವಿರೋಧ ಕಡಿಮೆ ಆಗಬಹುದು, ಈ ಭ್ರಮೆಯಲ್ಲಿ ಈ ಸಮೂಹ ಇರಬಾರದು. ಕೇವಲ ವ್ಯಾವಸಾಯಿಕವಾಗಿ ನಷ್ಟವಾಗಬಾರದು ಎಂದು ಈ ಸಮೂಹ ಕ್ಷಮಾಯಾಚನೆ ಮಾಡದೆಯೇ ಬದಲಾವಣೆ ಮಾಡುತ್ತಿರುವುದರಿಂದ ಹಿಂದೂಗಳು ಇಂತಹವರ ಮೇಲೆ ನಿಷೇಧ ಹೇರುತ್ತಾರೆಂದು ಬೇರೆ ಹೇಳಬೇಕಾಗಿಲ್ಲ !