ಈಗ ಸಹನಶಕ್ತಿಯು ಅಂತ್ಯವಾಗುತ್ತಾ ಇದೆ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿಯ ಪ್ರಕರಣ

ಕಟಿಹಾರ (ಬಿಹಾರ) – ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ನಡೆದ ದಾಳಿಗಳು ‘ಗಂಗಾ-ಜಮುನಾ ತಹಜೀಬ’ನ (ಮೊಗಲರ ಕಾಲದಲ್ಲಿ ಯಮುನಾ ಹಾಗೂ ಗಂಗಾ ನದಿಯ ದಡದಲ್ಲಿ ಮುಸ್ಮಾನರ ವಸತಿ ಹೆಚ್ಚಾದ ಬಳಿಕ ಹಿಂದೂ ಹಾಗೂ ಮುಸಲ್ಮಾನರ ಒಂದು ಸ್ವತಂತ್ರ್ಯ ಸಂಸ್ಕೃತಿ ಉದಯವಾಯಿತು. ಅದಕ್ಕೆ ‘ಗಂಗಾ-ಯಮುನಾ ತಹಜೀಬ’ ಎಂದು ಕರೆಯುತ್ತಾರೆ) ದಾವೆ ಮಾಡುವವರಿಗೆ ಕಪಾಳಮೋಕ್ಷವಾಗಿದೆ. ಸ್ವತಂತ್ರ್ಯದ ನಂತರದ ಕಾಲದಲ್ಲಿ ಈ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೊಸ ಮಸೀದಿಗಳು ನಿರ್ಮಾಣವಾಗಿದೆ. ಅದನ್ನು ಯಾರೂ ಕೂಡ ವಿರೋಧಿಸಲಿಲ್ಲ. ಮುಸಲ್ಮಾನರ ಜನಸಂಖ್ಯೆಯು ಅನೇಕ ಪಟ್ಟಿಯಲ್ಲಿ ಹೆಚ್ಚಿತು. ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯಗಳನ್ನು ಧ್ವಂಸ ಮಾಡಲಾಯಿತು. ಈಗ ಅಲ್ಲಿನ ಹಿಂದೂಗಳು ನಾಶವಾಗುವ ಮಾರ್ಗದಲ್ಲಿದ್ದಾರೆ. ಆದ್ದರಿಂದ ಈಗ ಸಹನಶಕ್ತಿಯು ಅಂತ್ಯವಾಗುತ್ತಿದೆ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹರವರು ಹೇಳಿದ್ದಾರೆ. ಶ್ರೀರಾಮನವಮಿ ಹಾಗೂ ಹನುಮಾನ ಜಯಂತಿಯ ನಿಮಿತ್ತ ನಡೆದ ಮೆರವಣಿಗೆಯ ಮೇಲೆ ನಡೆದ ದಾಳಿಯ ಕುರಿತು ಅವರು ಮಾತನಾಡುತ್ತಿದ್ದರು.

ಗಿರಿರಾಜ ಸಿಂಹರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈಗ ಶ್ರೀರಾಮನವಮಿಯ ಮೆರವಣಿಗೆಯನ್ನು ಪಾಕಿಸ್ತಾನದಲ್ಲಿ ಬಾಂಗಲಾದೇಶದಲ್ಲಿ ಅಥವಾ ಅಫಗಾನಿಸ್ತಾನದಲ್ಲಿ ತೆಗೆಯಬೇಕೆ ? ಈ ರೀತಿಯ ದಾಳಿ ಬೇರೆ ಯಾವುದಾದರೂ ಪಂಥದ ಮೆರವಣಿಗೆಯ ಮೇಲೆ ನಡೆದಿದ್ದರೆ, ಆಗ ರಾಹುಲ ಗಾಂಧಿಯವರಂತಹ ಮುಖಂಡರು ರಸ್ತೆಗೆ ಇಳಿಯುತ್ತಿದ್ದರು ಎಂದು ಹೇಳಿದರು.