ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಮತಾಂಧ

ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ’ನ ಮತ್ತೊಂದು ಪ್ರಕರಣ ಬಹಿರಂಗ !

ಇಂದೂರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಇಂದೂರಿನಲ್ಲಿ ‘ಲವ್ ಜಿಹಾದ’ನ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಗಾಜೀಪುರಾದಲ್ಲಿ ಅಬೂ ಜೈದ (ವಯಸ್ಸು ೨೭ ವರ್ಷ) ಎಂಬ ಮುಸಲ್ಮಾನ ಯುವಕನು ‘ರಾಹುಲ’ ಎಂಬ ಹಿಂದು ಹೆಸರನ್ನು ಇಟ್ಟುಕೊಂಡು ಇಂಸ್ಟಾಗ್ರಾಮನ ಮಾಧ್ಯಮದಿಂದ ಇಂದೂರಿನಲ್ಲಿನ ೧೭ ವರ್ಷದ ಹಿಂದು ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಘಟನೆ ಇತ್ತೀಚೆಗೆ ಬಹಿರಂಗವಾಗಿದೆ. ಅಲ್ಲಿಯ ಕೆಲವು ಹಿಂದು ಸಂಘಟನೆಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಅವರು ಅವರು ಆ ಅಪ್ರಾಪ್ತ ಬಾಲಕಿಯನ್ನು ಮತಾಂಧನ ಹಿಡಿತದಿಂದ ಕಾಪಾಡಿದರು.

‘ಲವ್ ಜಿಹಾದ’ನ ಈ ಘಟನೆಯು ಸುಮಾರು ಆರು ತಿಂಗಳ ಹಿಂದೆ ಇಂಸ್ಟಾಗ್ರಾಮನ ಮಾಧ್ಯಮದಿಂದ ಪ್ರಾರಂಭವಾಯಿತು. ಇಂಸ್ಟಾಗ್ರಾಮನಲ್ಲಿ ಹಿಂದು ಬಾಲಕಿಯು ಅಬೂ ಜೈದನೊಂದಿಗೆ ಸ್ನೇಹವಾಯಿತು. ಸ್ನೇಹವು ಪ್ರೇಮಕ್ಕೆ ರೂಪಾಂತರವಾಯಿತು. ಏಪ್ರಿಲ ೧೩ ರಂದು ಸಂತ್ರಸ್ಥೆಯ ಹುಟ್ಟುಹಬ್ಬವಿತ್ತು. ಆ ಅವಕಾಶವನ್ನು ಪಡೆದು ಆ ಬಾಲಕಿಯನ್ನು ಓಡಿಸಿಕೊಂಡು ಹೋಗುವ ಉದ್ದೇಶದಿಂದ ಅಬೂ ಜೈದ ಇಂದೂರು ತಲುಪಿದನು. ಏಪ್ರಿಲ ೧೪ರಂದು ಅವನು ಸಂತ್ರಸ್ಥೆಯನ್ನು ಬೈರವಾ ಸಮಾಜದ ಧರ್ಮಶಾಲೆಯ ಬಳಿ ಭೇಟಿಯಾಗಲು ಕರೆದನು, ಆ ಬಾಲಕಿಯು ಸಾಕಷ್ಟು ಸಮಯ ಮನೆಗೆ ವಾಪಸ್ಸಾಗದೆ ಇರುವುದನ್ನು ನೋಡಿ ಅವಳ ಪೊಷಕರು ಹಾಗೂ ಅಕ್ಕಪಕ್ಕದವರು ಹುಡುಕಲು ಪ್ರಾರಂಭಿಸಿದರು.

ನಗರದಲ್ಲಿನ ಕೆಲವು ಹಿಂದು ಸಂಘಟನೆಗಳಿಗೆ ಈ ‘ಲವ್ ಜಿಹಾದ’ ಪ್ರಕರಣದ ಮಾಹಿತಿ ಸಿಕ್ಕಿತು. ಅವರು ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದರು. ಹಾಗೂ ಆ ಹಿಂದೂ ಅಪ್ರಾಪ್ತ ಬಾಲಕಿಯನ್ನು ಮತಾಂಧನ ಹಿಡಿತದಿಂದ ಬಿಡುಗಡೆಗೊಳಿಸಿದರು.