ಹಿಂದೂ ಯುವಕನನ್ನು ಮದುವೆಯಾಗಿದ್ದಕ್ಕೆ ಮುಸ್ಲಿಂ ಹುಡುಗಿಯ ಮನೆಯವರಿಂದ ಯುವಕನಿಗೆ ಥಳಿತ

ಯುವಕನ ಮನೆಯಿಂದ ಯುವತಿಯನ್ನು ಕರೆದುಕೊಂಡು ಹೋದರು !

ಯಾವಾಗಲು ಹಿಂದೂ ಯುವತಿಯನ್ನು ವಿವಾಹವಾಗುವ ಮುಸಲ್ಮಾನ ಯುವಕನನ್ನು ಹಿಂದೂಗಳು ವಿರೋಧಿಸುವಾಗ ಮುಸಲ್ಮಾನರನ್ನೇ ಬೆಂಬಲಿಸುವ ಜಾತ್ಯತೀತರು ಈ ಏಕೆ ಮಾತನಾಡುವುದಿಲ್ಲ ?

ಕರ್ಣಾವತಿ (ಗುಜರಾತ) – ಹಿಂದೂ ಯುವಕನನ್ನು ಮದುವೆಯಾದನಂತರ ಮುಸ್ಲಿಂ ಹುಡುಗಿಯನ್ನು ಅಪಹರಿಸಲಾಗಿದೆ. ಯುವತಿಯ ಕುಟುಂಬವು ಅಪಹರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರನ್ನು ಬಂಧಿಸಲಾಯಿತು.

ಹಿಂದೂ ಯುವಕನ ಹೆಸರು ಲಲಿತ ಖಾಂಡವಿ ಇದೆ. ೪ ವರ್ಷಗಳ ಹಿಂದೆ ಸಿಮ್ರನ್ ಮುಲ್ತಾನಿ ಎಂಬ ಯುವತಿಯನ್ನು ಭೇಟಿಯಾಗಿದ್ದ. ಇಬ್ಬರೂ ಪ್ರೀತಿಸಿದ ನಂತರ ಕಳೆದ ವರ್ಷ ದೆಹಲಿಗೆ ಓಡಿಹೋಗಿ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ೩ ತಿಂಗಳ ಹಿಂದೆ ಕರ್ಣಾವತಿಗೆ ಹಿಂತಿರುಗಿದಾಗ ಯುವತಿಯ ಮನೆಯವರು ಲಲಿತ ಖಾಂಡವಿ ಅವರ ಮನೆಗೆ ಬಂದಿದ್ದರು. ಅವರು ಲಲಿತ ಖಾಂಡವಿಯನ್ನು ಥಳಿಸಿದರು. ಚಾಕುವನ್ನು ತೋರಿಸಿ ಸಿಮ್ರಾನಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಲಲಿತ ಖಾಂಡವಿ ಪೊಲೀಸರಲ್ಲಿ ದೂರು ನೀಡಿದ್ದರು.