ಕರೌಲಿ (ರಾಜಸ್ಥಾನ)ದಲ್ಲಿ ಯುಗಾದಿಯ ನಿಮಿತ್ತ ನಡೆಸಲಾದ ದ್ವಿಚಕ್ರ ವಾಹನಗಳ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣ !

  • ಮೆರವಣಿಗೆಯು ಮುಸಲ್ಮಾನರು ಬಹುಸಂಖ್ಯಾತರಿರುವ ಭಾಗದಿಂದ ಹೋಗುತ್ತಿರುವಾಗ ಆಕ್ರಮಣ

  • ೪ ಪೊಲೀಸರೊಂದಿಗೆ ೩೫ ಜನರು ಗಾಯಗೊಂಡರು

  • ನಗರದಲ್ಲಿ ಸಂಚಾರನಿರ್ಬಂಧ ಜ್ಯಾರಿಗೊಳಿಸಲಾಗಿದೆ

  • ಇಂಟರ್‌ನೆಟ್‌ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರವಿರುವುದರಿಂದ ಅಲ್ಲಿ ಹಿಂದೂಗಳು ಅಸುರಕ್ಷಿತರಾಗಿಯೇ ಇರುವರು, ಎಂಬುದು ಈ ಘಟನೆಯಿಂದ ಪುನಃ ಸ್ಪಷ್ಟವಾಗುತ್ತದೆ !

ಇತರ ಧರ್ಮೀಯರ ಧಾರ್ಮಿಕ ಮೆರವಣಿಗಳ ಮೇಲೆ ಹಿಂದೂಗಳು ಬಹುಸಂಖ್ಯಾತರಾಗಿರುವ ಭಾಗಗಳಲ್ಲಿ ಆಕ್ರಮಣ ನಡೆದಿರುವ ಘಟನೆಗಳನ್ನು ಕೇಳಿರುವಿರೇ ? ಆದರೆ ಹಿಂದೂಗಳ ಧಾರ್ಮಿಕ ಮೆರವಣಿಗೆಯು ಮುಸಲ್ಮಾನಬಹುಲ ಭಾಗಗಳಿಂದ ಹೊರಟಾಗ ಅವರ ಮೇಲೆ ಆಕ್ರಮಣಗಳಾದ ಘಟನೆಗಳು ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ ಮತ್ತು ಜಾತ್ಯಾತೀತರು ಈ ಬಗ್ಗೆ ಮೌನ ಪಾಲಿಸುತ್ತಾರೆ !

ಕರೌಲಿ (ರಾಜಸ್ಥಾನ) – ಯುಗಾದಿಯ ದಿನ ಇಲ್ಲಿ ಹಿಂದೂಗಳಿಂದ ನಡೆಸಲಾದ ದ್ವಿಚಕ್ರ ವಾಹನದ ಮೆರವಣಿಗೆಯು ಮುಸಲ್ಮಾನ ಬಹುಲ ಭಾಗದಿಂದ ಹೋಗುತ್ತಿರುವಾಗ ಅದರ ಮೇಲೆ ಮತಾಂಧರು ಆಕ್ರಮಣ ಮಾಡಿದ ನಂತರ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಮೋಹನ ಮಂದಿರ ಭಾಗದಲ್ಲಿನ ೧೨ಕ್ಕೂ ಹೆಚ್ಚಿನ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ೩ ವಾಹನಗಳಿಗೆ ಬೆಂಕಿ ಇಡಲಾಯಿತು. ಇದರಲ್ಲಿ ೩೫ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ೪ ಜನ ಪೊಲೀಸರೂ ಸೇರಿದ್ದಾರೆ. ಗಾಯಾಳುಗಳ ಪೈಕಿ ಪುಷ್ಪೇಂದ್ರ ಎಂಬ ವ್ಯಕ್ತಿಯ ಸ್ಥಿತಿಯು ಚಿಂತಾಜನಕವಾಗಿರುವುದಾಗಿ ಹೇಳಲಾಗುತ್ತಿದೆ. ಅವನ ಮೇಲೆ ಚಾಕೂವಿನಿಂದ ಆಕ್ರಮಣ ಮಾಡಲಾಯಿತು. ಈ ಹಿಂಸಾಚಾರದ ನಂತರ ಇಲ್ಲಿ ಸಂಚಾರನಿರ್ಬಂಧವನ್ನು ಹೇರಲಾಗಿದ್ದು ಇಂಟರ್‌ನೆಟ್‌ನ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.

ಸದ್ಯ ಇಲ್ಲಿ ಒತ್ತಡಯುಕ್ತ ವಾತಾವರಣವಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರ ಬಂದೋಬಸ್ತಿ ಇಡಲಾಗಿದೆ. ಪೊಲೀಸರು ಇಲ್ಲಿ ಧ್ವಜಸಂಚಲನೆಯನ್ನೂ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅಶೋಕ ಗೆಹ್ಲೋಟರವರು ‘ಅಪರಾಧಿಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಲಾಗುವುದು’, ಎಂದು ಹೇಳಿದ್ದಾರೆ. ಇದರೊಂದಿಗೆ ‘ಜನರು ಯಾವುದೇ ಗಾಳಿಸುದ್ಧಿಯನ್ನು ನಂಬಬಾರದು. ಶಾಂತಿ ಕಾಪಾಡಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಸಹಕರಿಸಬೇಕು’, ಎಂದು ಕರೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯ ವರೆಗೆ ೩೬ ಜನರನ್ನು ಬಂಧಿಸಲಾಗಿದೆ.