ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರಿಂದ ಹಿಂದೂಗಳ ಮನೆಗೆ ನುಗ್ಗಿ ದಾಂಧಲೆ !

ಬರೇಲಿ (ಉತ್ತರಪ್ರದೇಶ)ಯಲ್ಲಿ ಮಹಿಳೆಯರನ್ನು ನೋಡಿ ಅಶ್ಲೀಲವಾಗಿ ಅಂಗಾಭಿನಯ ಮಾಡುವ ಮತಾಂಧವನ್ನು ವಿರೋಧಿಸಿದ್ದರ ಪರಿಣಾಮ

ಮಹಿಳೆಯರ ಮಾನಭಂಗ
ಇಬ್ಬರು ಮತಾಂಧರ ಬಂಧನ

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗಲೂ ಮುಸಲ್ಮಾನಬಹುಲ ಭಾಗದಲ್ಲಿನ ಹಿಂದೂಗಳು ಅಸುರಕ್ಷಿತರಾಗಿರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಜನರ ಮೆಲೆ ಕಠೋರ ಕಾರ್ಯಾಚರಣೆಯನ್ನು ಮಾಡಲೇಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಬರೇಲಿ (ಉತ್ತರಪ್ರದೇಶ) – ಬರೇಲಿ ಜಿಲ್ಲೆಯಲ್ಲಿನ ಜಾಮ ಸಾವಂತ ಜನೂಬಿ ಎಂಬ ಮುಸಲ್ಮಾನ ಬಹುಲ ಊರಿನಲ್ಲಿ ಮತಾಂಧರು ಒಂದು ಹಿಂದೂ ಮನೆಯ ಮಹಿಳೆಯರಿಗೆ ಅಶ್ಲೀಲ ಅಭಿನಯ ಮಾಡಿ ತೋರಿಸಿದರು. ಇದನ್ನು ವಿರೋಧಿಸಿದಾಗ ಮತಾಂಧರು ಹಿಂದೂಗಳ ಮನೆಗೆ ನುಗ್ಗಿ ಹೊಡೆದಾಟ ನಡೆಸಿದರು. ಹಾಗೆಯೇ ಮಹಿಳೆಯರ ಮಾನಭಂಗ ಮಾಡಿ ಅವರ ಬಟ್ಟೆಗಳನ್ನೂ ಹರಿದರು. ಈ ಹಿಂದೂ ಕುಟುಂಬಕ್ಕೆ ಊರು ಬಿಟ್ಟು ಹೋಗಬೇಕೆಂದು ಬೆದರಿಸಲಾಗಿದೆ. ದೂರಿನ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ, ಇನ್ನೂ ೧೦ ಜನರನ್ನು ಹುಡುಕುತ್ತಿದ್ದಾರೆ. ಹಿಂದೂ ಸಂಘಟನೆಗಳಿಗೆ ಈ ಘಟನೆಯ ಮಾಹಿತಿ ದೊರೆತಾಗ ಅವರು ಹಿಂದೂ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿವೆ.

ಸಂತ್ರಸ್ತ ಕುಟುಂಬದಿಂದ ‘ನಮ್ಮ ನರೆಹೊರೆಯಲ್ಲಿರುವ ರಫೀಕ, ಅವರ ಮಕ್ಕಳಾದ ರಶೀದ, ಆಸೀಫ, ಆರೀಫ ಮತ್ತು ಜಾಹಿದ ತಮ್ಮ ಮನೆಯ ಮಾಳಿಗೆ ಮೇಲಿನಿಂದ ನಮ್ಮ ಮನೆಯಲ್ಲಿನ ಮಹಿಳೆಯರನ್ನು ನೋಡಿ ಅಶ್ಲೀಲ ಅಭಿನಯ ಮಾಡುತ್ತಿರುತ್ತಾರೆ. ಇದನ್ನು ವಿರೋಧಿಸಿದಾಗ ಅವರು ನಮ್ಮ ಮನೆಯಲ್ಲಿ ಖಡ್ಗ ಹಿಡಿದು ಆಕ್ರಮಣ ಮಾಡಿದರು’ ಎಂದು ಹೇಳಲಾಯಿತು.