ಸಂಯುಕ್ತ ಅರಬ್ ಅಮೀರತ್‌ನಲ್ಲಿ ‘ದ ಕಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು !

ಒಂದು ಕಡೆ ಭಾರತದಲ್ಲಿ ಈ ಚಲನಚಿತ್ರದಿಂದ ಧಾರ್ಮಿಕ ದ್ವೇಷ ಹರಡಲಾಗುತ್ತಿದೆ ಎಂದು ಡಾಂಬಿಕ ಜಾತ್ಯಾತೀತ ರಾಜಕೀಯ ಪಕ್ಷಗಳಿಂದ ಆರೋಪಿಸಲಾಗುತ್ತಿದೆ. ಈಗ ಒಂದು ಇಸ್ಲಾಮಿ ದೇಶದಲ್ಲಿ ಈ ಚಲನಚಿತ್ರ ಪ್ರದರ್ಶಿಸಲಾಗುವುದು ಎಂದರೆ ಅವರಿಗೆ ಸಿಕ್ಕಿರುವ ಕಪಾಳಮೋಕ್ಷ !

ಮುಂಬಯಿ – ಈಗ ಸಂಯುಕ್ತ ಅರಬ್ ಅಮೀರತ್ ಈ ಇಸ್ಲಾಮಿ ದೇಶದಲ್ಲಿ ಏಪ್ರಿಲ್ ೭ ರಿಂದ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು. ಈ ಕುರಿತು ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು, ಒಂದು ಇಸ್ಲಾಮಿ ದೇಶ ೪ ವಾರದಿಂದ ಕಠಿಣ ಸಮೀಕ್ಷೆಯ ನಂತರ ಚಲನಚಿತ್ರ ಪ್ರದರ್ಶಿಸಲು ಒಪ್ಪಿಕೊಂಡಿದೆ, ಹೀಗಿರುವಾಗ ಕೆಲವು ಭಾರತೀಯರು ಈ ಚಲನಚಿತ್ರಕ್ಕೆ ‘ಇಸ್ಲಾಂ ವಿರೋಧಿ’ ಎನ್ನುತ್ತಿದ್ದಾರೆ ಎಂದು ಹೇಳಿದರು.